ನಳಿನ್ ಎರಡನೇ ಬಾರಿ ಕಣಕ್ಕೆ
ಮಂಗಳೂರು: ಪಕ್ಷದೊಳಗಿನ ಪಿತೂರಿ ಹೊರತೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ 2ನೇ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಹಸಿರು ನಿಶಾನೆ ತೋರಿದೆ. ಕಳೆದ ಒಂದು ತಿಂಗಳಿಂದ ನಳಿನ್ ಕುಮಾರ್ಗೆ ಟಿಕೆಟ್ ತಪ್ಪಿಸಲು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಕಳೆದ ಚುನಾವಣೆಯಲ್ಲಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ವಿರುದ್ಧ 40 ಸಾವಿರಕ್ಕೂ ಹೆಚ್ಚು ಅಂತರದ ಗೆಲುವು ಪಡೆದಿದ್ದರು ನಳಿನ್. ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಅತೀ ಹೆಚ್ಚು ಬಳಸಿದ ಇಬ್ಬರಲ್ಲಿ ನಳಿನ್ ಕೂಡ ಒಬ್ಬರು. ಕ್ಷೇತ್ರಾದ್ಯಂತ ಓಡಾಟ ಮಾಡುತ್ತಿದ್ದರೂ ಅವರಿಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸುವವರಿಗೆ ತೊಂದರೆ ಇರಲಿಲ್ಲ. ಕೊನೆಗೂ ನಳಿನ್ ಕುಮಾರ್ ಸ್ಪರ್ಧೆಗೆ ಪಕ್ಷ ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ.
--