ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆಯಿಂದ ಚಂದನದಲ್ಲಿ 'ಕಿರು ಕಾಸು- ಹಿರಿ ಕನಸು' ಧಾರಾವಾಹಿ

Lingaraj Badiger
Updated On : 9 Mar 2014, 11:25 am

ಬೆಳ್ತಂಗಡಿ: ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ ಅಕ್ಮಿ ಎಂಬ ಸಂಸ್ಥೆಯಿಂದ ಪ್ರಾಯೋಜಿತ ಆರ್ಥಿಕ ಸಾಕ್ಷರತೆಯ ಕುರಿತಂತೆ ವೀಡಿಯೊ ಸರಣಿ ಕಾರ್ಯಕ್ರಮ 'ಕಿರು ಕಾಸು- ಹಿರಿಕನಸು' ಧಾರವಾಹಿಯು 10ರಿಂದ 19ರವರೆಗೆ 15 ಮತ್ತು 16ರಂದು ಹೊರತು ಪಡಿಸಿ, ಪ್ರತಿನಿತ್ಯ ರಾತ್ರಿ 8.30 ರಿಂದ 9.00 ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ, ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳು, ಫಲಾನುಭವಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ರಾಜ್ಯದ ದುರ್ಬಲ ವರ್ಗದ ಮತ್ತು ಬ್ಯಾಂಕ್ ವ್ಯವಹಾರ ಇಲ್ಲದ ಬಡವರ ಸಬಲೀಕರಣಕ್ಕಾಗಿ ರಚಿಸಲಾಗಿರುವ ಈ ಸರಣಿಯು ಆಕರ್ಷಕವಾಗಿದ್ದು, ಆರ್ಥಿಕ ಸೇರ್ಪಡೆಯ ಕುರಿತಂತೆ  ಮಾಹಿತಿಗಳನ್ನು ಕಥೆಯ ರೂಪದಲ್ಲಿ ನೀಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಮತದಾರರ ಹೆಸರು ಸೇರ್ಪಡೆಗೆ ವಿಶೇಷ ಆಂದೋಲನ
ಮಂಗಳೂರು: ಮತದಾರರ ಹೆಸರು ಸೇರ್ಪಡೆಗೆ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮಾ. 9ರಂದು ವಿಶೇಷ ಆಂದೋಲನ ನಡೆಯಲಿದೆ. ಅಂದು ಬೂತ್‌ಮಟ್ಟದ ಅಧಿಕಾರಿಗಳು ಆಯಾ ಮತಗಟ್ಟೆಗಳಲ್ಲಿ ಇರಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸ್ವೀಕರಿಸುವರು. ಈ ಸಂಬಂಧ ಫಾರಂ 6 ಮತಗಟ್ಟೆ ಅಲ್ಲಿಯೇ ದೊರೆಯಲಿದೆ. ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿರುವುದನ್ನು ಅಲ್ಲಿಯೇ ಖಚಿತಪಡಿಸಬಹುದು. ಹೆಸರು ಸೇರ್ಪಡೆ ಮಾಡಬಯಸುವವರು ದಾಖಲಾತಿ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಸಾಮೂಹಿಕವಾಗಿ ಮತದಾರರ ಸೇರ್ಪಡೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಜಿಲ್ಲೆಯ ನಾಗರಿಕರು ಈ ಅವಕಾಶವನ್ನು ಬಳಸಿಕೊಳವಂತೆ ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ.
ಲೋಕಾಯುಕ್ತರ ಪ್ರವಾಸ
ಮಂಗಳೂರು: ಲೋಕಾಯುಕ್ತ ನ್ಯಾ.ವೈ. ಭಾಸ್ಕರ್ ರಾವ್ ಮಾ. 9 ರಂದು ಸಂಜೆ 3 ಗಂಟೆಗೆ ಎಸ್‌ಡಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುವರು. ಮಾ. 10 ರಂದು ಬೆಳಗ್ಗೆ 10 ಗಂಟೆಗೆ ಎಸ್‌ಪಿ ಕಚೇರಿಯಲ್ಲಿ ಲೋಕಾಯುಕ್ತ ಪ್ರಕರಣಗಳ ಮತ್ತು ವಿಚಾರಣೆಗಳ ಪರಿಶೀಲನೆ ಸಭೆ ನಡೆಸುವರು. ಸಂಜೆ 3 ಗಂಟೆಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement