ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

15ರಿಂದ ಬಪ್ಪನಾಡು ದೇವಸ್ಥಾನ ವರ್ಷಾವಧಿ ಜಾತ್ರೋತ್ಸವ

Rashmi Kasaragodu
Updated On : 10 Mar 2014, 11:48 am

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ 15ರಿಂದ 22ರವರೆಗೆ ಜರಗಲಿದೆ. 15ರಂದು ಮಧ್ಯಾಹ್ನ ಧ್ವಜಾರೋಹಣ, ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯರ ಭೇಟಿ, 16ರಂದು ರಾತ್ರಿ ಉತ್ಸವ ಬಲಿ, 17ರಂದು ರಾತ್ರಿ ಪೇಟೆ ಸವಾರಿ, 18ರಂದು ರಾತ್ರಿ ಕೊಪ್ಪಲ ಸವಾರಿ, 19 ರಂದು ರಾತ್ರಿ ಬಾಕಿಮಾರು ದೀಪೋತ್ಸವ, 20ರಂದು ರಾತ್ರಿ ಕೆರೆ ದೀಪೋತ್ಸವ ನಡೆಯಲಿದೆ. 21ರಂದು ಮಧ್ಯಾಹ್ನ ಹಗಲು ರಥೋತ್ಸವ, ರಾತ್ರಿ ಉತ್ಸವ ಬಲಿ, ಶಯನೋತ್ಸವ, 22 ರಂದು ಶನಿವಾರ ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ ಬಲಿ, ಓಕುಳಿ, ರಾತ್ರಿ ಶ್ರೀ ದೇವಿ ಮತ್ತು ಸಸಿಹಿತ್ಲು ಶ್ರೀ ಭಗವತಿಯರ ಭೇಟಿ, ಮಹಾ ರಥೋತ್ಸವ, ಅವಭೃತ, ಧ್ವಜಾರೋಹಣ, 23ರಂದು ಉರ ಪರವೂರ ಭಕ್ತಾದಿಗಳಿಂದ ಹಣ್ಣು ಕಾಯಿ ಸಮರ್ಪಣೆ, 24ರಂದು ಮಧ್ಯಾಹ್ನ ಮಹಾ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, 26ರಂದು ರಾತ್ರಿ ದೇವಳದ ಆಡಳಿತಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ನೇಮೋತ್ಸವವು ಜರಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement