ಆಧಾರ್ ಕೇಂದ್ರಗಳು ಮಾ. 31ರವರೆಗೆ
ಮಂಗಳೂರು: ದ.ಕ. ಜಿಲ್ಲೆಯ ಸುಳ್ಯ ತಾಲೂಕು ಹೊರತುಪಡಿಸಿ ಆಧಾರ್ ಕೇಂದ್ರಗಳಾದ ಮಂಗಳೂರು ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣ ಲಾಲ್‌ಬಾಗ್, ಮಹಾನಗರಪಾಲಿಕೆ ವಾಣಿಜ್ಯ ಸಂಕೀರ್ಣ ಕದ್ರಿ ಮಲ್ಲಿಕಟ್ಟೆ, ಸಮುದಾಯ ಭವನ ಉಳ್ಳಾಲ, ಮಹಾನಗರಪಾಲಿಕೆ ಉಪ ಕಚೇರಿ ಸುರತ್ಕಲ್, ಹಳೆ ತಾಲೂಕು ಪಂಚಾಯ್ತಿ ಕಚೇರಿ ಬಂಟ್ವಾಳ, ಸಮುದಾಯ ಭವನ ಪುತ್ತೂರು, ಐಬಿ ನಾಡಕಚೇರಿ ಮೂಡುಬಿದಿರೆ, ಬೆಳ್ತಂಗಡಿ ತಾಲೂಕು ಪಂಚಾಯ್ತಿ ಕಟ್ಟಡದ, ನಗರ ಪಂಚಾಯ್ತಿ ಮೂಲ್ಕಿಗಳಲ್ಲಿ ನೋಂದಣಿಯು ಮಾ. 31 ರವರೆಗೆ ಕಾರ್ಯ ನಿರ್ವಹಿಸಲಿದೆ.
ಬ್ರಾಡ್‌ಬ್ಯಾಂಡ್ ದರ ಪರಿಷ್ಕರಣೆ
ಮಂಗಳೂರು: ಬಿಎಸ್‌ಎನ್‌ಎಲ್ ವಾರ್ಷಿಕ ನಿಯಮಿತ ಬಳಕೆ ಬ್ರಾಡ್‌ಬ್ಯಾಂಡ್ ಪ್ಲಾನ್ ದರವನ್ನು ಪರಿಷ್ಕರಿಸಲಾಗಿದೆ. ವನ್ ಇಂಡಿಯಾ ರು. 180ರ ಅರ್ಬನ್ ಪ್ಲಾನ್ ದರ ರು. 195ಕ್ಕೆ ಪರಿಷ್ಕರಿಸಲಾಗಿದೆ. ಈ ದರ ಮಾ.1ರಿಂದ ಜಾರಿಗೆ ಬಂದಿದೆ