ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆರ್‌ಟಿಇ ಕಾಯ್ದೆ ಬಲಗೊಂಡರೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ: ನ್ಯಾ.ಭಾಸ್ಕರ ರಾವ್

Rashmi Kasaragodu
Updated On : 10 Mar 2014, 11:52 am

ಮಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಇನ್ನಷ್ಟು ಬಲಪಡಿಸಿದಾಗ ದೇಶದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯ ಎಂದು ಲೋಕಾಯುಕ್ತ ನ್ಯಾ.ವೈ. ಭಾಸ್ಕರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಎಸ್‌ಡಿಎಂ ಕಾಲೇಜಿನಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಕಾನೂನು ಉತ್ಸವ ಸಮಾರೋಪದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ದೇಶ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವದ ಮೌಲ್ಯ ಅರಿವಾಗಬೇಕಾದರೆ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕು. ಭ್ರಷ್ಟಾಚಾರದಿಂದ ದೇಶದ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದ್ದು, ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದರು. ಉನ್ನತ ಹುದ್ದೆಗಾಗಿ ಒಬ್ಬ ವ್ಯಕ್ತಿ ಲಂಚ ನೀಡುತ್ತಾನೆ, ಆದರೆ ಹುದ್ದೆ ಸಿಕ್ಕದ ನಂತರ ತಾನೂ ಲಂಚ ಸ್ವೀಕರಿಸುತ್ತಾನೆ. ಯುವಜನತೆಯಲ್ಲಿ ಈ ಕುರಿತು ಜಾಗೃತಿ ಮೂಡಬೇಕಾಗಿದೆ ಎಂದರು.
ಇದೇ ಸಂದರ್ಭ ಕೇರಳ ಹೈಕೋರ್ಟ್ ನ್ಯಾಯಾಧೀಶ ಜ. ಆಂಟೋನಿ ಡೊಮೆನಿಕ್ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಗೊಂಡ ಶೋಭಾ, ಪವಿತ್ರ ಕುಂದರ್, ಹೇಮಾಶ್ರೀ, ಮಂಜುನಾಥ್, ಜಯಪ್ರಕಾಶ್, ಗೋಕುಲ್, ಸೋಮನಾಥ್, ವಿಘ್ನೇಶ್ ಕುಮಾರ್ ಇವರನ್ನು ಸನ್ಮಾನಿಸಿ ಗೌರವಿಸಿದರು.
ಕಾನೂನು ಕಾಲೇಜ್ ಪ್ರಾಂಶುಪಾಲ ಡಾ.ಪಿ.ಕೆ. ರವೀಂದ್ರ, ಕಾರ್ಯಕ್ರಮ ಸಂಚಾಲಕ ಡಾ. ತಾರಾನಾಥ್, ವಿದ್ಯಾರ್ಥಿಗಳಾದ ಮಾನಸ ಹೆಗ್ಡೆ, ಅನೀಶ್ ಆಚಾರ್ಯ, ಅನೀಶ್‌ಕೃಷ್ಣ, ಮೇಘನಾ ಬಳ್ಳಾಲ್‌ಬಾಗ್, ಸ್ವರ್ಣ ಶೆಣೈ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement