ಘನತ್ಯಾಜ್ಯ ನಿರ್ವಹಣೆ ಉಪಕರಣಕ್ಕೆ ಆಸ್ತಿ ತೆರಿಗೆ
ಮಂಗಳೂರು: ಕರ್ನಾಟಕ ಪೌರ ನಿಗಮಗಳ ಅಧಿನಿಯಮದಂತೆ ಘನತ್ಯಾಜ್ಯ ನಿರ್ವಹಣೆ ಉಪಕರಣವನ್ನು 1-1-2014ರಿದ ಜಾರಿಯಾಗುವಂತೆ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದು ಆಯುಕ್ತ ಗೋಕುಲದಾಸ್ ನಾಯಕ್ ಹೇಳಿದ್ದಾರೆ. ವಸತಿ ಕಟ್ಟಡಗಳಿಗೆ ವಾರ್ಷಿಕ ರು. 240 ರಿಂದ 960 ಮೊತ್ತ, ವಸತಿಯೇತರ ಕಟ್ಟಡಗಳಿಗೆ ವಾರ್ಷಿಕ ರು. 600 ರಿಂದ 9,600 ಮೊತ್ತ, ಕೈಗಾರಿಕೆ ಕಟ್ಟಡಗಳಿಗೆ ರು. 3600 ರಿಂದ 10,800 ಮೊತ್ತ, ಕಲ್ಯಾಣ ಮಂಟಪ, ಹೊಟೇಲ್, ಹಾಸ್ಟೆಲ್ಗಳಿಗೆ ರು. 3,600 ರಿಂದ 36 ಸಾವಿರ ಮೊತ್ತ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.