ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರೀತಿಸಿದ ಜೋಡಿಗೆ ಸ್ಥಳೀಯರ ಮಧ್ಯಸ್ಥಿಕೆಯಲ್ಲಿ ವಿವಾಹ ಬಂಧನ

Rashmi Kasaragodu
Updated On : 10 Mar 2014, 11:53 am

ಸುಬ್ರಹ್ಮಣ್ಯ: ಪ್ರೀತಿಸುತ್ತಿದ್ದ ಜೋಡಿ ಪೈಕಿ ಯುವಕ ವಿವಾಹವಾಗಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಸುಬ್ರಹ್ಮಣ್ಯದ ದೇವಸ್ಥಾನವೊಂದರಲ್ಲಿ ವಿವಾಹ ಮಾಡಿಸಿದ ಘಟನೆ ಭಾನುವಾರ ನಡೆದಿದೆ. ಪಂಜ ಪಲ್ಲೋಡಿಯ ಪ್ರಕಾಶ್ ಮತ್ತು ಹರಿಣಾಕ್ಷಿ ದಂಪತಿ ಪುತ್ರ ಅರುಣ್ ಕುಮಾರ್ ವೃತ್ತಿಯಲ್ಲಿ ಆಟೋ ಚಾಲಕ ವೃತ್ತಿ ನಿರ್ವಹಿಸುತ್ತಿದ್ದರು. ಅವರಿಗೆ ಎರಡು ವರ್ಷಗಳ ಹಿಂದೆ ಹಾಳೆ ತಟ್ಟೆ ತಯಾರಿಸುವ ಘಟಕವೊಂದರಲ್ಲಿ  ಕೆಲಸ ನಿರ್ವಹಿಸುತ್ತಿದ್ದ ಐವತ್ತೊಕ್ಲು ಗ್ರಾಮದ ಕಂರ್ಬು ಪೂಜಾರಿ ಮನೆ ನಿವಾಸಿ ಬಾಲಕೃಷ್ಣ ಗೌಡರ ಪುತ್ರಿ ಶಶಿಕಲಾ ಪಿ. ಎಂಬಾಕೆಯ ಪರಿಚಯವಾಗಿ ಪ್ರೀತಿಸತೊಡಗಿದರು. ಯುವತಿಯ ತಾಯಿ ತೀರಿಕೊಂಡಿದ್ದು, ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಕೆ ಪ್ರಿಯಕರನೊಂದಿಗೆ ವಿವಾಹವಾಗಲು ಒತ್ತಾಯಿಸಿದಾಗ ಯುವಕ ಹಿಂದೇಟು ಹಾಕಿದ್ದ. ಬಳಿಕ ತಮ್ಮ ಪ್ರೇಮ ಪ್ರಕರಣವನ್ನು ಸ್ಥಳೀಯರೊಂದಿಗೆ ಯುವತಿ ತಿಳಿಸಿದಾಗ ಪಂಜದ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಮ್ಮುಖದಲ್ಲಿ ಸುಬ್ರಹ್ಮಣ್ಯದ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಮದುವೆ ನೆರವೇರಿಸಲಾಯಿತು. ಪಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಬೊಳ್ಳಾಜೆ, ಮಹೇಶ್ ಕರಿಕ್ಕಳ, ದಿನೇಶ್ ಪುಂಡಿಮನೆ, ಶಿವರಾಮ ಕೆರೆಮೂಲೆ, ಹುಡುಗಿಯ ತಂದೆ ಬಾಲಕೃಷ್ಣ ಗೌಡ, ಚಿಕ್ಕಪ್ಪ ನಾರ್ಣಪ್ಪ ಗೌಡ, ಮಾವ ರಾಘವ, ಅಣ್ಣ ಸುರೇಶ ಪೂಜಾರಿಮನೆ ಮತ್ತು ಇಬ್ಬರ ಸಂಬಂಧಿಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement