ಮಹಿಳಾ ದಿನ ಪ್ರಯುಕ್ತ 'ನಿರ್ಭಯಾ' ಓಟ
ಮಂಗಳೂರು: ಸೆಂಟರ್ ಫಾರ್ ಇಂಟರ್ಗ್ರೇಟೆಡ್ ಲರ್ನಿಂಗ್ ಮತ್ತು ಎನ್ಐಟಿಕೆ ಎಂಬಿಎ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಭಾನುವಾರ ಮಂಗಳಾ ಮೈದಾನದಲ್ಲಿ ನಡೆದ 'ನಿರ್ಭಯಾ' ಓಟಕ್ಕೆ ಅಂತಾರಾಷ್ಟ್ರೀಯ ಅತ್ಲೆಟಿಕ್ ವಂದನಾ ಶಾನುಭಾಗ್ ಪೈ ಚಾಲನೆ ನೀಡಿದರು.
6 ಕಿ.ಮೀ. ವ್ಯಾಪ್ತಿಯ ಓಟವು ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡು ಮಂಗಳಾ ಮೈದಾನದಿಂದ ಲಾಲ್ಬಾಗ್, ಕೆಎಸ್ಆರ್ಟಿಸಿ, ಕದ್ರಿ ಕಂಬಳ ರಸ್ತೆ, ಕೆಎಸ್ರಾವ್ ರಸ್ತೆ, ಬಂಟ್ಸ್ಹಾಸ್ಟೆಲ್, ಪಿವಿಎಸ್ ಮೂಲಕ ಮತ್ತೆ ಮಂಗಳಾ ಮೈದಾನದಲ್ಲಿ ಸಮಾಪನಗೊಂಡಿತು.
ಓಟದಲ್ಲಿ ಎನ್ಐಟಿಕೆ ಎಂಬಿಎ ಹಾಗೂ ಎಂಜಿನಿಯರಿಂಗ್ ಕಾಲೇಜು, ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜ್, ಸಹ್ಯಾದ್ರಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 700 ಮಂದಿ ಪಾಲ್ಗೊಂಡಿದ್ದರು. ಸಮಾರೋಪದಲ್ಲಿ ಮ್ಯಾಜಿಕ್ ಮಾಂತ್ರಿಕ ಕುದ್ರೋಳಿ ಗಣೇಶ್, ಇನ್ಸ್ಟೆಕ್ಟರ್ ಕಲಾವತಿ, ಸೇವಾಶ್ರಮದ ಗೀತಾ ಆರ್ ಶೆಟ್ಟಿ, ಎನ್ಐಟಿಕೆ ನಿರ್ದೇಶಕಿ ಪ್ರೊ. ಸ್ವಪ್ನಾ ಭಟ್ಟಾಚಾರ್ಯ, ಶ್ರೀನಿವಾಸ್ ಕಾಲೇಜು ನಿರ್ದೇಶಕ ಎಂ.ಆರ್. ವಾಸುದೇವ ಇದ್ದರು.