ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಳ್ಳಾಲ: ಎಸ್‌ಸಿಡಿಸಿಸಿ ಬ್ಯಾಂಕ್ 69ನೇ ಶಾಖೆ ಕಾರ್ಯಾರಂಭ

Lingaraj Badiger
Updated On : 11 Mar 2014, 12:43 pm

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್‌ನ 69ನೇ ಶಾಖೆ ಉಳ್ಳಾಲದಲ್ಲಿ ಸೋಮವಾರ ಆರಂಭಗೊಂಡಿತು.
ಶಾಖೆ ಉದ್ಘಾಟಿಸಿದ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಬ್ಯಾಂಕ್ ಎಂದರೆ ಸಾಲ ಮಾತ್ರ ಕೊಡುವ ಸಂಸ್ಥೆ ಅಲ್ಲ. ಭವಿಷ್ಯ ರೂಪಿಸುವ ಸಂಸ್ಥೆ. ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌ಗೆ ತುಲನೆ ಮಾಡಿದಾಗ ವಾಣಿಜ್ಯ ಬ್ಯಾಕ್ ಬಡವರಿಗೆ ಸಾಲ ನೀಡುವುದಿಲ್ಲ. ಕೊಟ್ಟರೂ ನೂರಾರು ಪ್ರಶ್ನೆಗಳನ್ನು ಎದುರಿಸಬೇಕು ಎಂದರು.
ಬ್ಯಾಂಕ್‌ನ ಪ್ರತಿಯೊಬ್ಬ ಗ್ರಾಹಕರು ಆರ್ಥಿಕವಾಗಿ ಬೆಳೆಯಬೇಕು ಎಂಬುದು ನಮ್ಮ ಮೊದಲ ಧ್ಯೇಯ. ಈಗಾಗಲೇ 95 ಸಾವಿರ ರೈತರಿಗೆ ಕಿಸಾನ್ ಕಾರ್ಡ್ ವಿತರಿಸಿ, ಗ್ರಾಮೀಣ ಜನರಿಗೆ ಸ್ಪಂದಿಸಿದ್ದೇವೆ. ಬ್ಯಾಂಕ್ ಇಲ್ಲದ ಕಡೆ ಮೊಬೈಲ್ ಬ್ಯಾಂಕ್ ವ್ಯಾನ್ ತೆರಳಿ ಕನಿಷ್ಠ 2 ಗಂಟೆ ಸೇವೆ ನೀಡುವ ವ್ಯವಸ್ಥೆ ಇದೆ ಎಂದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಸಾಲಿಯಾನ್ ಗಣಕೀಕರಣ ಸೌಲಭ್ಯ ಉದ್ಘಾಟಿಸಿದರು. ಉಳ್ಳಾಲ ಪುರಸಭೆ ಅಧ್ಯಕ್ಷೆ ಗಿರಿಜಾ ಎಂ. ಭಾಯಿ ಭದ್ರತೆ ಕೋಶ ಉದ್ಘಾಟಿಸಿದರು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ, ಉಳ್ಳಾಲ ಮೊಗವೀರ ಸಂಘ ಅಧ್ಯಕ್ಷ ಸದಾನಂದ ಬಂಗೇರ ಶುಭ ಹಾರೈಸಿದರು.
ಸನ್ಮಾನ: ಅತ್ಯಲ್ಪ ಅವಧಿಯಲ್ಲಿ 600 ಖಾತೆ, 10 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ದಾಖಲೆ ಬರೆದ ಬ್ಯಾಂಕ್ ವ್ಯವಸ್ಥಾಪಕ ಹೈದರ್, ಮುಂಗಡ ವಿಭಾಗ ಪ್ರಧಾನ ವ್ಯವಸ್ಥಾಪಕ ಕೆ.ಉಮೇಶ್ ಗೌಡ, ಉಪಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್ ಅವರನ್ನು ಸನ್ಮಾನಿಸಿದರು.
ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ವ್ಯವಸ್ಥಾಪನೆ ನಿರ್ದೇಶಕ ಗೋಪಾಲಕೃಷ್ಣ ಭಟ್, ಪುರಸಭೆ ಸದಸ್ಯ ಪೊಡಿಮೋನು ಇಸ್ಮಾಯಿಲ್, ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್, ಕೆ.ಎಸ್.ದೇವರಾಜ್ ಇದ್ದರು.
ನಿರ್ದೇಶಕ ಸದಾಶಿವ ಉಳ್ಳಾಲ್ ಸ್ವಾಗತಿಸಿದರು. ವಿಶೇಷ ಅಧಿಕಾರಿ ಲಕ್ಷ್ಮಣ ಮಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement