ಲಕ್ಷದ್ವೀಪಕ್ಕೆ ಡೀಸೆಲ್: ಮೂವರ ಸೆರೆ
ಮಂಗಳೂರು: ಲಕ್ಷದ್ವೀಪಕ್ಕೆ ಅಕ್ರಮವಾಗಿ ಡೀಸೆಲ್ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ನಿಯಾಜ್, ಎಸ್.ಎಂ.ಹಸೈನಾರ್, ಉಸ್ಮಾನ್, ಮೊಹಮ್ಮದ್ ಶರೀಫ್ ಬಂಧಿತರು. ರೇಶ್ಮಾ ಫ್ಯೂಯಲ್ಸ್ ಮತ್ತು ನೇತ್ರಾವತಿ ಸರ್ವಿಸ್ಸ್ಟೇಶನ್ನಿಂದ 1 ಸಾವಿರ ಲೀಟರ್ ಡೀಸೆಲನ್ನು ಆಟೋ ರಿಕ್ಷಾ ಟೆಂಪೊಗಳಲ್ಲಿ ಇರಿಸಿದ್ದರು.
30.6 ಲಕ್ಷ ಮೌಲ್ಯ ಅಕ್ರಮ ಚಿನ್ನ ವಶ
ಮಂಗಳೂರು: ಬಜಪೆ ವಿಮಾನ ನಿಲ್ದಾಣದಲ್ಲಿ ರು. 30.6 ಲಕ್ಷ ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾಸರರೋಡು ಮೊಹಮ್ಮದ್ ಕುನ್ಹಿ ಚೀರಿಕುಂಡು (30) ದುಬೈಯಿಂದ ಜೆಟ್ ಏರ್ವೇಸ್ನಲ್ಲಿ ಸೋಮವಾರ ಬೆಳಗ್ಗೆ 5.30ಕ್ಕೆ ಆಗಮಿಸಿದ್ದು, ಆತನಿಂದ 1.13 ಕಿಲೋ ತೂಕದ 4 ಚಿನ್ನದ ಗಟ್ಟಗಳನ್ನು ವಶಪಡಿಸಿಕೊಳ್ಳಲಾಗಿದೆ.