ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯಾರ್ಥಿನಿ ಜತೆಗಿದ್ದ ಯುವಕಗೆ ಧರ್ಮದೇಟು

Lingaraj Badiger
Updated On : 11 Mar 2014, 12:39 pm

ಸುಳ್ಯ: ಆಸ್ಪತ್ರೆ ಸಮೀಪ ಯುವಕನೊಬ್ಬ ವಿದ್ಯಾರ್ಥಿನಿಯ ಮೈ ಮುಟ್ಟಿ ಮಾತನಾಡುತ್ತಿದ್ದುದನ್ನು ನೋಡಿದ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ, ಪೊಲೀಸರಿಗೊಪ್ಪಿಸಿದ ಘಟನೆ ಇತ್ತೀಚೆಗೆ ನಡೆದಿದೆ. ರಿಕ್ಷಾ ಚಾಲಕನಾಗಿರುವ ಜಯನಗರದ ನೌಫಲ್ ಎಂಬ ಯುವಕ ಮಧ್ಯಾಹ್ನದ ವೇಳೆಗೆ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ರಿಕ್ಷಾದಲ್ಲಿ ಕುರುಂಜಿಭಾಗ್‌ನ ಆಸ್ಪತ್ರೆಯೊಂದರ ಸಮೀಪ ಕರೆದುಕೊಂಡು ಬಂದಿದ್ದ. ಬಳಿಕ ಇಬ್ಬರು ಕಟ್ಟೆಯೊಂದರ ಮೇಲೆ ಕುಳಿತು ಮೊಬೈಲ್‌ನಲ್ಲಿ ಚಿತ್ರಗಳನ್ನು ನೋಡುತ್ತಿದ್ದರು. ಈ ವೇಳೆ ಆ ಯುವಕ ಆಕೆಯ ಮೈಮುಟ್ಟಿ ಮಾತನಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸುತ್ತಿದ್ದ ಕೆಲವು ಸಾರ್ವಜನಿಕರು ಅಲ್ಲಿಗೆ ಹೋಗಿ ಆ ಯುವಕನನ್ನು ಪ್ರಶ್ನಿಸಿ, ಆತನಿಗೆ ಧರ್ಮದೇಟು ನೀಡಿದರು. ವಿದ್ಯಾರ್ಥಿನಿಗೂ ಎಚ್ಚರಿಕೆ ನೀಡಿ, ಮನೆಗೆ ಕಳುಹಿಸಿದರು ಎನ್ನಲಾಗಿದೆ.  ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ನೌಫಲ್‌ನನ್ನು ಪೊಲೀಸರಿಗೊಪ್ಪಿಸಿದರು. ಪೊಲೀಸರು ಆ ಯುವಕನ ಮನೆಯವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement