16 ರಂದು 'ಮಲೈಕಾ ತ್ರಿವಳಿ ಸಂಸ್ಥೆ' ಉದ್ಘಾಟನೆ
ಮಂಗಳೂರು: ಗ್ರಾಹಕರ ಹೆಚ್ಚುವರಿ ಸೇವೆಗಾಗಿ ಮಲೈಕಾ ಸಮೂಹ ಸಂಸ್ಥೆ ವತಿಯಿಂದ ಮಾ. 16 ರಂದು ತೊಕ್ಕೊಟ್ಟು ಆರ್ಇಬಿ ಸಂಕೀರ್ಣದಲ್ಲಿ 'ಮಲೈಕಾ ತ್ರಿವಳಿ ಸಂಸ್ಥೆ' ಉದ್ಘಾಟನೆಗೊಳ್ಳಲಿದೆ.
ಮಲೈಕಾ ಗೃಹೋಪಯೋಗಿ ಮತ್ತು ಮಲೈಕಾ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಹಾಗೂ ಮಲೈಕಾ ಸಿಲ್ಕ್ ಸಾರೀಸ್ ಎಂಪೋರಿಯಂ ಮಳಿಗೆ ತೆರೆಯಲಾಗುವುದು ಎಂದು ಮಲೈಕಾ ಸಂಸ್ಥೆಗಳ ಕಾರ್ಯಾಧ್ಯಕ್ಷ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಗ್ಗೆ 11ಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಮಳಿಗೆ ಉದ್ಘಾಟಿಸುವರು. ಮಲೈಕಾ ಸಿಲ್ಕ್ ಸಾರೀಸ್ ಮಳಿಗೆಯನ್ನು ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೊ ಹಾಗೂ ಮಲೈಕಾ ಸೊಸೈಟಿಯನ್ನು ಉಳ್ಳಾಲ ಪುರಸಭೆ ಅಧ್ಯಕ್ಷೆ ಗಿರಿಜಾ ಉದ್ಘಾಟಿಸುವರು.
ಮಂಗಳೂರು ಧರ್ಮಪ್ರಾಂತ್ಯದ ದಕ್ಷಿಣ ಪ್ರಾದೇಶಿಕ ಮುಖ್ಯಸ್ಥ ಫಾ. ಗ್ರೆಗೋರಿ ಡಿಸೋಜ ಹಾಗೂ ಪೆರ್ಮನ್ನೂರು ಚರ್ಚಿನ ಫಾ. ಜೋನ್ ಬ್ಯಾಪ್ಟಿಸ್ಟ್ ಸಲ್ಡಾನ ಆಶೀರ್ವಚನ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲ್, ಉಳ್ಳಾದ ದರ್ಗಾ ಅಧ್ಯಕ್ಷ ಯು.ಎಸ್. ಹಂಝಾ, ಉಳ್ಳಾಲ ಶ್ರೀ ಚಿರುಂಬಿ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ವಕೀಲ ಅಶ್ವಿನ್ ಕುಮಾರ್ ರೈ ಪಾಲ್ಗೊಳ್ಳುವರು.
ಮುಂಬೈನಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟ, ವಿತರಣೆ, ಪ್ರದರ್ಶನಕ್ಕೆ ಮನೆ ಮಾತಾಗಿರುವ ಮಲೈಕಾ ಸಂಸ್ಥೆ ತೊಕ್ಕೊಟ್ಟಿನಲ್ಲಿ ಪ್ರಾರಂಭಗೊಂಡಿದ್ದು, ಗ್ರಾಹಕರಿಗೆ ವಿಶೇಷ ರಿಯಾಯಿತಿ ಮತ್ತು ಬಹುಮಾನ ಮಾದರಿಯಲ್ಲಿ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದರು.