ಕೆಸರೆತ್ತಲು ಬಂದ ಯಂತ್ರವ ಕೆರೆಯೇ ನುಂಗಿತ್ತ!
ಬಂಟ್ವಾಳ: 'ಬೇಲಿಯೇ ಎದ್ದು ಹೊಲ ಮೇಯ್ದರೆ...?' ಅದೇ ರೀತಿ ಕೆಸರೆತ್ತಲು ಬಂದ ಯಂತ್ರವೇ ಕೆಸರಲ್ಲಿ ಮುಳುಗಿದರೆ...?
ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಹೊಳೆತ್ತುತ್ತಿದ್ದ ಹಿಟಾಚಿ ಯಂತ್ರ ಕೆಸರಿನಲ್ಲಿ ಹೂತುಹೋದ ಘಟನೆ ಬುಧವಾರ ನಡೆದಿದೆ. ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿತ್ತು. ಕಳೆದ ವಾರ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಈ ಕಾಮಗಾರಿಗೆ ಶಿಲಾನ್ಯಾಸವನ್ನೂ ಮಾಡಿದ್ದು.
ಕಳೆದ ಕೆಲವು ದಿನಗಳಿಂದ ಈ ಕೆರೆಯ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿತ್ತು. ಬುಧವಾರ ಜೆಸಿಬಿ ವಾಹನ ಕೆರೆಯ ಮಧ್ಯೆ ಹೂಳೆತ್ತುತ್ತಿದ್ದ ವೇಳೆ ಆಕಸ್ಮಿಕವಾಗಿ ಜೆಸಿಬಿ ಕೆಸರಿನಲ್ಲಿ ಮುಳುಗಿದೆ.
ಆದರೆ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಕೆಸರಿನಲ್ಲಿ ಪೂರ್ತಿ ಮುಳುಗಿದ ಹಿಟಾಚಿಯನ್ನು ಬಳಿಕ ಬೇರೆ ಯಂತ್ರದ ಮೂಲಕ ಮೇಲೆತ್ತಲಾಯಿತು.