ಕ್ಷಮೆಯಾಚನೆ; ಪ್ರಕರಣ ಇತ್ಯರ್ಥ
ಮೂಲ್ಕಿ: ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಬಸ್ಸು ಚಾಲಕ ಹಸನ್ ಮೇಲೆ ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಶೆಟ್ಟಿ ಹಲ್ಲೆ ನಡೆಸಿದ ಪ್ರಕರಣ ಮೂಲ್ಕಿ ಪೋಲಿಸರ ಮುತುವರ್ಜಿಯಲ್ಲಿ ಕಿನ್ನಿಗೋಳಿಯಲ್ಲಿ ನಡೆದ ಬಸ್ಸು ಚಾಲಕರ ಮತ್ತು ಮಾಲಕರ ಸಭೆಯಲ್ಲಿ ಇತ್ಯರ್ಥಗೊಂಡಿದೆ.
ದುರ್ಗಾ ಪ್ರಸಾದ್ ಶೆಟ್ಟಿ ಘಟನೆಗೆ ಕ್ಷಮೆ ಯಾಚಿಸಿದ್ದು, ಇದರಿಂದ ಕಿನ್ನಿಗೋಳಿಯಲ್ಲಿ ಸ್ಥಗಿತಗೊಂಡಿದ್ದ ಬಸ್ಸು ಸಂಚಾರ ಆರಂಭಗೊಂಡಿದೆ.