ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನೆ ನಿರ್ಮಿಸುವುದಾಗಿ ಮಹಿಳೆಗೆ ವಂಚನೆ; ದೂರು

Rashmi Kasaragodu
Updated On : 13 Mar 2014, 12:14 pm

ಪುತ್ತೂರು: ಬಡ ಮತ್ತು ವಿಧವೆಯಾದ ತನಗೆ ನೆರೆಯ ವ್ಯಕ್ತಿಯೊಬ್ಬರು ಹೊಸ ಮನೆ ಖರೀದಿಸಿ ಕೊಡುವುದಾಗಿ ಹೇಳಿ ತನ್ನ ಹಳೆ ಮನೆ ಮತ್ತು ಜಮೀನನ್ನು ಮಾರಾಟ ಮಾಡಿಸಿ ಅದರಲ್ಲಿ ಬಂದ ಹಣವನ್ನು ಪಡೆದುಕೊಂಡು ವಂಚಿಸಿದ್ದಾರೆ ಎಂದು ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಬನ್ನೂರು ಡಂಪಿಂಗ್‌ಯಾರ್ಡ್ ನಿವಾಸಿ ದಿ. ರತ್ನಸ್ವಾಮಿ ಎಂಬವರ ಪತ್ನಿ ಲಲಿತಾ ಆರೋಪಿಸಿದ್ದಾರೆ.
 ಅವರು ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಬನ್ನೂರು ಗ್ರಾಮದ ಸರ್ವೆ ನಂಬರ್ 130-113ರಲ್ಲಿ 5 ಸೆಂಟ್ಸ್ ವಿಸ್ತೀರ್ಣದ ಸ್ಥಳದಲ್ಲಿ ಹಂಚಿನ ಮನೆ ನಿರ್ಮಿಸಿ ವಾಸವಾಗಿದ್ದೆ. 1991ರಲ್ಲಿ ತನ್ನ ಪತಿಯು ಮೃತಪಟ್ಟಿದ್ದು, ಬಳಿಕ ಒಂಟಿಯಾಗಿ ಈ ಮನೆಯಲ್ಲಿ ವಾಸ್ತವ್ಯವಿದ್ದೆ. ಈ ಸಂದರ್ಭದಲ್ಲಿ ತನಗೆ ಸಹಾಯಮಾಡುವ ನೆಪದಲ್ಲಿ ಬಂದ ಇಲ್ಲಿನ ನೆರೆಯ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಮಾರುವಂತೆ ಸೂಚಿಸಿದರು.
  ಅದರಂತೆ ತಾನು ಆತನ ಮೂಲಕವೇ ಮನೆಯನ್ನು 72 ಸಾವಿರಕ್ಕೆ ಮಾರಾಟ ಮಾಡಿದೆ. ಈ ಪೈಕಿ ತನಗೆ ಕೇವಲ 31 ಸಾವಿರ ಮಾತ್ರ ನೀಡಿದ್ದು, ಉಳಿದ ಹಣವನ್ನು ನೀಡದೆ ವಂಚನೆ ಮಾಡಿರುತ್ತಾರೆ. ಅಲ್ಲದೆ ಆತ ತನಗೆ ನೀರ್ಪಾಜೆ ಎಂಬಲ್ಲಿ 3 ಸೆಂಟ್ಸ್ ಜಾಗ ಕೊಡಿಸುವುದಾಗಿ ಹೇಳಿ ನಂಬಿಸಿ ಬಳಿಕ ಮೋಸ ಮಾಡಿದ್ದಾರೆ. 7 ವರ್ಷಗಳಿಂದ ಆತ ಮನೆ ವ್ಯವಸ್ಥೆಯನ್ನೂ ಮಾಡದೆ ಹಣವನ್ನೂ ನೀಡದೆ ವಂಚಿಸಿದ್ದಾನೆ ಎಂದು ಆರೋಪಿಸಿದರು.  
ವಂಚನೆ ಪ್ರಕರಣದ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement