ಇಂದು ವಿಚಾರ ಸಂಕಿರಣ
ಬಂಟ್ವಾಳ: ವಾಮದಪದವು ಸ.ಪ್ರ.ದ. ಕಾಲೇಜಿನಲ್ಲಿ ರಾಜ್ಯ ಮಟ್ಟದ ಏಕದಿನ ವಿಚಾರ ಸಂಕಿರಣ ಶುಕ್ರವಾರ ನಡೆಯಲಿದೆ. ಸಿನಿಮಾ ನಿರ್ದೇಶಕ ಪಿ. ಶೇಷಾದ್ರಿ ವಿಚಾರ ಸಂಕಿರಣ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ.ಕೆ.ಪಿ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸುವರು. ವಿಚಾರ ಸಂಕಿರಣದಲ್ಲಿ ಹೊಸಕಾಲೀನ ಮಾಧ್ಯಮಗಳ ಸಾಧ್ಯತೆಗಳು ಕುರಿತು ಸಂವಾದ, ಉಪನ್ಯಾಸ, ಪ್ರಾತ್ಯಕ್ಷಿಕೆ, ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಗೋಷ್ಠಿಯಲ್ಲಿ ಕಿರುತೆರೆ ನಿರ್ದೇಶಕ ವಿನು ಬಳಂಜ, ವಿಮರ್ಶಕ ಜೋಗಿ ಉಪನ್ಯಾಸ ನೀಡಲಿದ್ದಾರೆ. ಸಮಾರೋಪದಲ್ಲಿ ರಂಗಶಂಕರದ ಆರ್ಟಿಸ್ಟಿಕ್ ಡೈರೆಕ್ಟರ್ ಎಸ್. ಸುರೇಂದ್ರ ರಾವ್ ಭಾಷಣ ಮಾಡಲಿದ್ದಾರೆ.