ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಪ್ಪಿನಂಗಡಿ: ರು. 3.5 ಲಕ್ಷ ವೆಚ್ಚದಲ್ಲಿ ಶಾಶ್ವತ ಕಂಬಳ ಕರೆ ನಿರ್ಮಾಣ

Rashmi Kasaragodu
Updated On : 14 Mar 2014, 12:25 pm

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಮಾ.15ರಂದು ನಡೆಯಲಿರುವ ವಿಜಯ-ವಿಕ್ರಮ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ ಕೂಟೇಲು ಸೇತುವೆ ಬಳಿ ನದಿ ದಡದಲ್ಲಿ ಇತ್ತೀಚೆಗೆ ಜರಗಿತು.
ಈ ಹಿಂದಿನಂತೆ ನೇತ್ರಾವತಿ ನದಿಯ ಮರಳಿನಲ್ಲಿ ನಿಮರ್‌ಸುವ ಕರೆಯ ಬದಲಾಗಿ ಉಪ್ಪಿನಂಗಡಿಯ ಕೂಟೇಲು ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಒಡೆತನದ ಭೂಮಿಯಲ್ಲಿ ನಡೆಸಲುದ್ದೇಶಿಸಿರುವ ಕಂಬಳ ನಡೆಯುವ ಜಾಗ ಸಮತಟ್ಟು ಮಾಡುವ ಮತ್ತು ಶಾಸ್ವತ ಕರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಂಬಳ ಸಮಿತಿ ಪದಾಧಿಕಾರಿಗಳು ಕಾಮಗಾರಿ ವೀಕ್ಷಿಸಿದರು.
ಕರೆ ನಿರ್ಮಾಣ: ಕಂಬಳ ಸಮಿತಿ ಅಧ್ಯಕ್ಷ, ಉದ್ಯಮಿ ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳ ಕೋಣಗಳ ಮಾಲಕರ ಕೋರಿಕೆಯಂತೆ, ಓಟದ ಕೋಣಗಳ ಅನುಕೂಲತೆಗೆ ಅನುಗುಣವಾಗಿ ಕರೆಯನ್ನು ವ್ಯವಸ್ಥಿತವಾಗಿ ಗದ್ದೆ, ಗಟ್ಟಿ ಕರೆಯಾಗಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದು, ಸುಮಾರು ರು. 3.5 ಲಕ್ಷ ವೆಚ್ಚ ಬಜೆಟ್ ಹಾಕಿಕೊಂಡಿದ್ದೇವೆ. 475 ಅಡಿ ಉದ್ದ, 42 ಅಡಿ ಅಗಲದ ಕೆರೆ ನಿರ್ಮಾಣ ಆಗಲಿದೆ. ಅದರ ಮುಂದೆ ಆಕರ್ಷಖ ವೇದಿಕೆ ನಿರ್ಮಿಸಲಾಗುವುದು. ನದಿ ಕಿನಾರೆಯಲ್ಲಿ ಕರೆ ಆಕರ್ಷಕವಾಗಿ, ರೂಪುಗೊಳ್ಳಲಿದೆ ಎಂದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯದರ್ಶಿಗಳಾದ ಬೆಳ್ಳಿಪ್ಪಾಡಿ ಕೇಶವ ಭಂಡಾರಿ, ಚಂದ್ರಶೇಖರ ಮಡಿವಾಳ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ, ಪದಾಧಿಕಾರಿಗಳಾದ ನಿರಂಜನ ರೈ ಮಠಂತಬೆಟ್ಟು, ರಾಮಚಂದ್ರ ಮಣಿಯಾಣಿ, ಕೃಷ್ಣ ನಾಯಕ್ ನಟ್ಟಿಬೈಲ್, ವಿಠಲ ಶೆಟ್ಟಿ ಕದಿಕ್ಕಾರು, ಹರೀಶ್ಚಂದ್ರ ಆಚಾರ್ಯ, ಹರೀಶ್ ನಟ್ಟಿಬೈಲು ಇದ್ದರು.
ನಾಳೆ ಕಂಬಳ ಉದ್ಘಾಟನೆ
ವಿಜಯ ವಿಕ್ರಮ ಜೋಡುಕರೆ ಕಂಬಳ 15ರಂದು ಕೂಟೇಲು ಎಂಬಲ್ಲಿ ನಿರ್ಮಿಸಲಾದ ನವೀನ ಮಾದರಿಯ ಜೋಡುಕರೆಯಲ್ಲಿ ನಡೆಯಲಿದೆ.  ಕಾರ್ಯಮವನ್ನು ಪುತ್ತೂರು ತಹಸೀಲ್ದಾರ್ ಕುಳ್ಳೇ ಗೌಡ ಉದ್ಘಾಟಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಕ್ಯಾಂಪ್ಕೋಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಾಗವಹಿಸಲಿದ್ದಾರೆ.
 ಈ ಸಂದರ್ಭದಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ರಾಜೋತ್ಸವ ಪ್ರಶಸ್ತಿ ವಿಜೇತ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಅವರನ್ನು ಸನ್ಮಾನಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement