ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚಿನ್ನಾಭರಣ ಕಳವು

Rashmi Kasaragodu
Updated On : 14 Mar 2014, 12:27 pm

ಬ್ರಹ್ಮಾವರ: ಇಲ್ಲಿನ ಕಚ್ಚೂರು ಗ್ರಾಮದ ಬಾರ್ಕೂರು ಎಂಬಲ್ಲಿ ಮನೆಯೊಂದರಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಭರಣ ಕಳವಾದ ಘಟನೆ ಗುರುವಾರ ನಡೆದಿದೆ. ಇಲ್ಲಿನ ನಿವಾಸಿ ಜಾನ್ ಜೋಸಿ ಪಿಕಾರ್ಡೋ (53) ಮನೆಯಲ್ಲಿ ಬೆಳಗ್ಗೆ ಯಾರೂ ಇಲ್ಲದ ಸಂದರ್ಭ ಎದುರಿನ ಬಾಗಿಲಿನ ಬೀಗ ಮುರಿದು ಮನೆಯೊಳಗಿದ್ದ ಕಪಾಟು ತೆರೆದು ಸುಮಾರು ರು. 2 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ, ನೆಕ್ಲೆಸ್, 4 ಬಳೆಗಳು ಮತ್ತು ರು. 10 ಸಾವಿರ ನಗದು ಕಳವಾಗಿದೆ. ಪಿಕಾರ್ಡೋ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ: ಪಾದಚಾರಿ ಸಾವು
ಗಂಗೊಳ್ಳಿ: ಮೇಲ್ ಗಂಗೊಳ್ಳಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಾದಚಾರಿ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ಮೃತರು ಸುಬ್ಬಣ್ಣ ಶೆಟ್ಟಿ (50). ಅವರು ಸಂಜೆ ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದಾಗ ಗಂಗೊಳ್ಳಿಯಿಂದ ಬಂದ ಬೈಕ್ ಡಿಕ್ಕಿ ಹೊಡೆಯಿತು. ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಯಿತು. ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿದಾರೂ ಅದಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ನಾಗರಾಜ ಶೇರಿಗಾರ್ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಡಿಕ್ಕಿ; ಟಿಪ್ಪರ್ ಪಲ್ಟಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಎಂಬಲ್ಲಿ ಡಾಂಬರು ಜಲ್ಲಿ ಮಿಶ್ರಣ ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಟಿಪ್ಪರ್ ಪೂರ್ತಿ ಹಾನಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಗೋಳಿತೊಟ್ಟಿನಲ್ಲಿರುವ ಶರೀಫ್ ಡಾಂಬರು ಮಿಕ್ಸಿಂಗ್ ಘಟಕದಿಂದ ಡಾಂಬರು ಮಿಶ್ರಿತ ಜಲ್ಲಿ ಹೇರಿಕೊಂಡು ಗುಂಡ್ಯ, ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯ ಕಡೆಗೆ ಟಿಪ್ಪರ್ ಹೋಗುತ್ತಿತ್ತು. ಆದರೆ ಟಿಪ್ಪರ್ ಪೆರಿಯಶಾಂತಿ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಸ್ಟೇರಿಂಗ್ ಲಾಕ್ ಆಗಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement