ನಾಳೆ ಕಾರ್ಯಾಗಾರ
ವಿಟ್ಲ: ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶನಿವಾರ ಬೆಳಗ್ಗೆ 9.30ರಿಂದ ಸಂಜೆ 5ರತನಕ ಕಾಮದುಘಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 'ಗೋವು ಮತ್ತು ಕೃಷಿ' ಕುರಿತು ಪರೀಕ್ಷಿತ್ ತೋಳ್ಪಾಡಿ, ದೇಸೀ ಗೋವಿನ ಬಗ್ಗೆ ಡಾ.ವೈ.ವಿ. ಕೃಷ್ಣಮೂರ್ತಿ, 'ಗೋವು ಮತ್ತು ಆಧ್ಯಾತ್ಮ' ಬಗ್ಗೆ ಲಕ್ಷ್ಮೀಶ ತೋಳ್ಪಾಡಿ, 'ಗೋವು ಮತ್ತು ನಮ್ಮ ಆಹಾರ' ಬಗ್ಗೆ ಡಾ. ಗೋಪಿನಾಥ್, 'ಗೋವು ಮತ್ತು ಆರ್ಥಿಕತೆ' ಬಗ್ಗೆ ಪ್ರೊ. ಕುಮಾರಸ್ವಾಮಿ ಮಾಹಿತಿ ನೀಡುತ್ತಾರೆ ಎಂದು ಹವ್ಯಕ ಮಹಾಮಂಡಲ ಪ್ರಕಟಣೆ ತಿಳಿಸಿದೆ.