ಬಿ.ಸಿ.ರೋಡ್: ಕಾಂಗ್ರೆಸ್ ಕಾರ್ಯಕರ್ತರ ಸಭೆ
ಬಂಟ್ವಾಳ: ಕಾಂಗ್ರೆಸ್ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕರೆ ನೀಡಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಿ.ಸಿ. ರೋಡ್ನಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ, ಜನಪ್ರತಿನಿಧಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಲ್ಲಡ್ಕದಲ್ಲಿ ಕಾಂಗ್ರೆಸ್ ಸಾಮರಸ್ಯ ಸಭೆಗೆ ಅಡ್ಡಿ ಪಡಿಸಿದ ಘಟನೆಯನ್ನು ಸಭೆ ಖಂಡಿಸಿತು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಪಕ್ಷದ ಬಲವರ್ಧನೆಗಾಗಿ ಬೂತ್ ಮತ್ತು ವಲಯ ಮಟ್ಟದಲ್ಲಿ ಸಭೆ ನಡೆಸಿ ಮತದಾರರ ಸೇರ್ಪಡೆಗೊಳಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ಪದ್ಮನಾಭ ರೈ ಮಾತನಾಡಿದರು.
ಹಿರಿಯ ಕಾಂಗ್ರೆಸಿಗ ಜಿನರಾಜ್ ಆರಿಗ, ಸುದರ್ಶನ್ ಜೈನ್, ಪದ್ಮಶೇಖರ್ ಜೈನ್, ಐಡಾ ಸುರೇಶ್, ಮಾಧವ ಮಾವೆ, ಸಂಪತ್ ಕುಮಾರ್ ಶೆಟ್ಟಿ, ರಾಜಶೇಖರ್ ನಾಯಕ್, ಸಂಜೀವ ಪೂಜಾರಿ, ಬಿ.ಕೆ. ಇದಿನಬ್ಬ, ಪಿಯೂಸ್ ರೋಡ್ರಿಗಸ್, ಪರಮೇಶ್ವರ ಎಂ. , ಸುಬಾಸ್ಚಂದ್ರ ಶೆಟ್ಟಿ, ಮಧುಸೂದನ ಶೆಣೈ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಇದ್ದರು.