ಇಂದಿನಿಂದ ಬಪ್ಪನಾಡು ಜಾತ್ರೆ
ಮೂಲ್ಕಿ: ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಶನಿವಾರ ಆರಂಭಗೊಳ್ಳಲಿದ್ದು ಮಧ್ಯಾಹ್ನ ಧ್ವಜಾರೋಹಣ, ಶ್ರೀ ದೇವಿ ಮತ್ತು ಸಸಿಹಿತ್ಲು ಭಗವತಿಯರ ಭೇಟಿ, ರಾತ್ರಿ ಉತ್ಸವ ಬಲಿ ಜರುಗಲಿದೆ.
ವಿಟ್ಲ: ಇಂದು ಶಟಲ್ ಬ್ಯಾಡ್ಮಿಂಟನ್ ಪಂದ್ಯ
ವಿಟ್ಲ: ದಿ ಬಾಯ್ಸ್ ಕಾನತ್ತಡ್ಕ ವತಿಯಿಂದ ಹೊನಲು ಬೆಳಕಿನ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಶನಿವಾರ ರಾತ್ರಿ 8ರಿಂದ ಕಾನತ್ತಡ್ಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ನಾಳೆ ರಕ್ತದಾನ ಶಿಬಿರ
ಮಂಗಳೂರು: ನಿಟ್ಟೆ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕ ವತಿಯಿಂದ ಮಾ.16ರಂದು ನಂತೂರಿನ ಶ್ರೀಭಾರತೀ ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಶಿಬಿರ ನಡೆಯಲಿದೆ.