ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಫಿಸಿಯೋಥೆರಪಿ ಮಂಡಳಿ ರಚನೆಗೆ ಒತ್ತಾಯ

Rashmi Kasaragodu
Updated On : 15 Mar 2014, 1:19 am

ಮಂಗಳೂರು: ಫಿಸಿಯೋಥೆರಪಿ ವ್ಯಾಸಂಗ ಮಾಡಿದವರಿಗೆ ಅಧಿಕೃತ ಮಾನ್ಯತೆ ಸಿಗುವಂತಾಗಲು ರಾಜ್ಯದಲ್ಲಿ ಫಿಸಿಯೋಥೆರಪಿ ಮಂಡಳಿ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ಡಿ.ಪ್ರೇಮ್‌ಕುಮಾರ್ ಹೇಳಿದ್ದಾರೆ.
ಅವರು ಶುಕ್ರವಾರ ಡಾ.ಎಂ.ವಿ.ಶೆಟ್ಟಿ ಫಿಸಿಯೋಥೆರಪಿ ಕಾಲೇಜಿನ ಬೆಳ್ಳಿ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ಹಾಗೂ ಫಿಸಿಯೋಥೆರಪಿಗೆ ದೇಶ ವಿದೇಶದಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ ಸರಿಯಾದ ಮಾನ್ಯತೆಯ ಅಗತ್ಯವಿದೆ. ಸರ್ಕಾರ ಈಗಾಗಲೇ ಫಿಸಿಯೋಥೆರಪಿ ಮಂಡಳಿ ರಚನೆಗೆ ಮುಂದಾಗಿದ್ದು, ರೂಪುರೇಷೆ ಹಂತದಲ್ಲಿದೆ. ಇದನ್ನು ತ್ವರಿತ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಪ್ರಸ್ತುತ 174 ಫಿಸಿಯೋಥೆರಪಿ ಕಾಲೇಜುಗಳಿದ್ದು, 1.25 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಫಿಸಿಯೋಥೆರಪಿ ಮಂಡಳಿಯಲ್ಲಿ ನೋಂದಾಯಿಸಿದರೆ ಉದ್ಯೋಗಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ರಾಜ್ಯದ ಮೊದಲ ಫಿಸಿಯೋಥೆರಪಿ ಕಾಲೇಜು ಇದಾಗಿದ್ದು, ಮೆಡಿಕಲ್ ಕಾಲೇಜಿಗಿಂತ ಉತ್ತಮ ರೀತಿಯಲ್ಲಿ ಶಿಕ್ಷಣ ಸಿಗುತ್ತಿದೆ ಎಂದು ಶ್ಲಾಘಿಸಿದರು.
ಡಾ.ಎಂ.ವಿ.ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಸ್ಥಾಪಕ ಕಾರ್ಯದರ್ಶಿ ಡಾ.ಎಂ.ರಾಮಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿ, ಈ ಫಿಸಿಯೋಥೆರಪಿ ಕಾಲೇಜು ಸಾಗಿಬಂದ ಹಾದಿಯನ್ನು ಸ್ಮರಿಸಿದರು. ಫಿಸಿಯೋಥೆರಪಿ ಮಂಡಳಿ ರಚನೆಯಾದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರಯೋಜನವಾಗಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ಡಯಾನ ಪಿಂಟೋ, ಟ್ರಸ್ಟಿಗಳಾದ ಪ್ರೊ.ಹಿಮಾ ಊರ್ಮಿಳಾ ಶೆಟ್ಟಿ, ಡಾ.ರಂಜಿನ್ ಶೆಟ್ಟಿ, ಆಡಳಿತ ಅಧಿಕಾರಿ ಪ್ರೊ.ಬಿ.ಗೋವಿಂದ ನೈಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement