ಕೈಯೂರು: ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ 4ನೇ ವಾರ್ಡ್‌ನ ಕೈಯೂರುವಿನಲ್ಲಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರದ ಸ್ವರವೆಬ್ಬಿಸಿದ್ದಾರೆ. ಈ ಪ್ರದೇಶವನ್ನು ರಾಜಕೀಯ ನಾಯಕರು, ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಿದ್ದಾರೆ. ಕೈಯೂರು ನಿವಾಸಿಗಳಿಗೆ ಯಾವುದೇ ಒಂದು ಸರ್ಕಾರದ ಆಂತರಿಕ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಪ್ರಮುಖವಾಗಿ ಇಲ್ಲಿಯ ರಸ್ತೆಗಳು ನಾದುರಸ್ತಿಯಲ್ಲಿದ್ದು ಕಳೆದ 15ವರ್ಷಗಳಿಂದ ನೀಡಿದ ಮನವಿಗಳು, ಅಹವಾಲುಗಳು ಮೂಲೆಗುಂಪು ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಮನನೊಂದ ಕೈಯೂರು ನಾಗರಿಕರು ಹಾಗೂ ಕೈಯೂರು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಚುನಾವಣಾ ಸಮಿತಿ ವತಿಯಿಂದ ಚುನಾವಣೆ ಬಹಿಷ್ಕಾರದ ಮೂಲಕ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಕೈಯೂರಿನ ಶಶಿಧರ, ಮನೋರಾಜ್ ಶೆಟ್ಟಿ ಹಾಗೂ ಹಿರಿಯರಾದ ಉಸ್ಮಾನ್ ಕೈಯೂರು ಹಿತರಕ್ಷಣಾ ಸಮಿತಿ ಸರ್ವ ಸದಸ್ಯರು ಹಾಗೂ ಕೈಯೂರು ನಾಗರಿಕರ ಸಮ್ಮುಖದಲ್ಲಿ ಪ್ರತಿಭಟಿಸಲಾಯಿತು.