ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದೋಚುವ ಗಾಂಧಿ ಕುಟುಂಬಕ್ಕಿಂತ ಮೋದಿಯೇ ಮೇಲು: ನಳಿನ್

Rashmi Kasaragodu
Updated On : 18 Mar 2014, 12:52 pm

ಬೆಳ್ತಂಗಡಿ: ಭಾರತವನ್ನು ದೋಚುವ ಗಾಂಧಿ ಕುಟುಂಬಕ್ಕಿಂತ ಅಭಿವೃದ್ಧಿ ಚಿಂತನೆಯುಳ್ಳ ನರೇಂದ್ರ ಮೋದಿಯೇ ಪ್ರಧಾನಿಯಾಗಲಿದ್ದಾರೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ನಳಿನ್ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳ್ತಂಗಡಿ ಜೈನ್‌ಪೇಟೆಯ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ ರಾಜಕಾರಣವಿಲ್ಲ: ಕಾಂಗ್ರೆಸಿಗರಿಗೆ ಇಂದು ಟೀಕೆ ಮಾಡಲು ವಿಷಯಗಳಿಲ್ಲ. ಕೇಂದ್ರದ ಕೊಡುಗೆಗಳ ಬಗ್ಗೆ ಮಾತನಾಡಲು ಭಯವಿದೆ.  ಅದಕ್ಕಾಗಿ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಳಿನ್ ಕುಮಾರ್ ಕಟೀಲ್ ಆಗಿಯೇ ಚುನಾವಣೆಗೆ ನಿಂತಿದ್ದೇನೆ. ಜಾತಿಯ ಅಡಿಯಲ್ಲಿ ರಾಜಕಾರಣ ಮಾಡಿಲ್ಲ ಎಂದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಮಹತ್ವದ ಚುನಾವಣೆ ಇದು ಎಂದರು.
ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ಮಾತನಾಡಿ, ನರೇಂದ್ರ ಮೋದಿಗೆ ಅಮೇರಿಕಾ ವೀಸಾ ನಿರಾಕರಣೆಯ ಹಿಂದೆ ಕೇಂದ್ರದ ಯುಪಿಎ ಸರ್ಕಾರವಿದೆ. ಭಾರತೀಯರ ಆತ್ಮಗೌರವವನ್ನು ವಿದೇಶಗಳ ಎದುರು ಯುಪಿಎ ಸರ್ಕಾರ ಹರಾಜು ಹಾಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಸಮಾವೇಶ ಉದ್ಘಾಟಿಸಿದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಯುವಮೋಚರಾ ಅಧ್ಯಕ್ಷ ರಂಜನ್ ಜಿ.ಗೌಡ ಮತ್ತಿತರರಿದ್ದರು. ಬೆಳ್ತಂಗಡಿ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸವಣಾಲು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನಂದಕುಮಾರ್ ಪೂಂಜಾಲಕಟ್ಟೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement