ಪುತ್ತೂರು ಕಬಕ: ರು. 1.5 ಲಕ್ಷ ದಾಖಲೆ ರಹಿತ ನಗದು ಪತ್ತೆ
ಪುತ್ತೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸೋಮವಾರ ರಾತ್ರಿ ಪುತ್ತೂರು ನಗರದ ಹೊರವಲಯದ ಕಬಕ ಎಂಬಲ್ಲಿ ವಾಹನದಲ್ಲಿ ದಾಖಲೆರಹಿತವಾಗಿ ಸಾಗಾಟ ನಡೆಸುತ್ತಿದ್ದ ರು. 1.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಕಬಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆಯಲ್ಲಿ ಮಂಗಳೂರಿನಿಂದ ಆಗಮಿಸಿದ ಸ್ವಿಫ್ಟ್ ಕಾರಿನ ಡ್ಯಾಶ್‌ಬಾಕ್ಸ್‌ನಲ್ಲಿ ನಗದು ಪತ್ತೆಯಾಗಿದೆ. ವಿಚಾರಣೆ ವೇಳೆಯಲ್ಲಿ ಈ ಹಣವನ್ನು ಕೋಳಿ ಖರೀದಿಗಾಗಿ ಪುತ್ತೂರಿನ ಕೋಳಿ ಫಾರ್ಮ್‌ಗೆ ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ದಾಖಲೆ ಪತ್ರಗಳು ಇಲ್ಲದಿರುವ ಕಾರಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳು ಸೂಚಿಸಿದರು. ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಕುಳ್ಳೇಗೌಡ ಎಂ.ಟಿ, ನಗರ ಠಾಣಾ ಇನ್‌ಸ್ಪೆಕ್ಟರ್ ಬಿ.ಕೆ. ಮಂಜಯ್ಯ, ಎಸ್.ಐ ರಫೀಕ್ ಇದ್ದರು