ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕ್ಷೇತ್ರದಿಂದ ವಲಸೆ ಹೋಗೋರೇ ಹೆಚ್ಚು ಒಮ್ಮೆ ಸೋತವರು ಮತ್ತೆ ಗೆಲ್ಲೋದೆ ಡೌಟು

Rashmi Kasaragodu
Updated On : 20 Mar 2014, 1:48 am

ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ವಲಸೆ ಬಂದವರು ಕಡಿಮೆ. ಸದ್ಯ ದಕ್ಷಿಣ ಕನ್ನಡದಿಂದ ವಲಸೆ ಹೋಗಿರುವ ನಾಲ್ಕು ಮಂದಿ ರಾಜ್ಯದ ನಾಲ್ಕು ಕಡೆ ಸ್ಪರ್ಧಿಸುತ್ತಿದ್ದಾರೆ.
 ಮುಖ್ಯಮಂತ್ರಿ ಆದ ಬಳಿಕ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಎರಡು ಬಾರಿ ಸ್ಪರ್ಧಿಸಿ ಸೋತಿದ್ದಾರೆ. ಇಲ್ಲಿ ಸ್ಪರ್ಧಿಸಿದ ಬಳಿಕ ಉಡುಪಿಗೆ ವಲಸೆ ಹೋಗಿದ್ದ ಬಿಜೆಪಿಯ ಡಿ.ವಿ.ಸದಾನಂದ ಗೌಡ ಶಾಸಕರಾಗಿ ಮುಖ್ಯಮಂತ್ರಿಯೂ ಆಗಿರುವುದು ವಿಶೇಷ.
 ಈ ಕ್ಷೇತ್ರದಲ್ಲಿ ಸೋತವರು ಗೆಲ್ಲುವುದಿಲ್ಲ ಮಾತಿದೆ. ಆದರೆ ಸೋತು ಮತ್ತೆ ಗೆದ್ದ ದಾಖಲೆ ಇದ್ದರೆ ಅದು ಧನಂಜಯ ಕುಮಾರ್ ಮಾತ್ರ. ಆದರೆ ಆವರು ರಾಜಕೀಯ ಬದುಕಲ್ಲಿ ಸಂಪೂರ್ಣ ಸೋತು ಹೋಗಿದ್ದಾರೆ.
1989ರಲ್ಲಿ ಸ್ಪರ್ಧಿಸಿ ಸೋತಿದ್ದ ಧನಂಜಯ ಕುಮಾರ್ 1991ರಲ್ಲಿ ಸ್ಪರ್ಧಿಸಿ ಗೆದ್ದರು. ಈ ಕ್ಷೇತ್ರದಲ್ಲಿ ಘಟಾನುಘಟಿ ರಾಜಕೀಯ ಧುರೀಣರು ಸ್ಪರ್ಧಿಸಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಜನಾರ್ದನ ಪೂಜಾರಿ ಹೊರತು ಪಡಿಸಿ ಮತ್ಯಾರು ಮರು ಸ್ಪರ್ಧೆಗೆ ಬಯಸಿಲ್ಲ. 1991ಕ್ಕೆ ಮುನ್ನ ಪೂಜಾರಿ ನಾಲ್ಕು ಬಾರಿ ಗೆದ್ದಿದ್ದರೆ, ಅಲ್ಲಿಂದ ಬಿಜೆಪಿ ಈ ಕ್ಷೇತ್ರವನ್ನು ಗೆದ್ದಿದೆ. ಜನಾರ್ದನ ಪೂಜಾರಿ ನಾಲ್ಕು ಬಾರಿ ಸೋತಿದ್ದು, ಸತತ 9 ನೇ ಬಾರಿ ಸ್ಪರ್ಧಿಸುತ್ತಿರುವುದು ದಾಖಲೆ.
ಹೊರಜಿಲ್ಲೆಗೆ ವಲಸೆ: ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಎರಡು ಬಾರಿ, ಚಿಕ್ಕಮಗಳೂರು ಕ್ಷೇತ್ರದಿಂದ ಒಂದು ಬಾರಿ ಸ್ಪರ್ಧಿಸಿ ಸೋತಿರುವ ಎಂ.ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿಯಿಂದ ಐದು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಸತತ ಗೆಲವು ಸಾಧಿಸಿದ ಧನಂಜಯಕುಮಾರ್ ಪಕ್ಷದಲ್ಲಿ ಮೂಲೆಗುಂಪಾದರು. ಕೆಜೆಪಿ ಸೇರಿ, ಅಲ್ಲಿಂದ ಜೆಡಿಎಸ್ ಪಾಳಯ ಸೇರಿ ಈ ಬಾರಿ ಚಿಕ್ಕಮಗಳೂರಿಂದ ಸ್ಪರ್ಧಿಸುತ್ತಿದ್ದಾರೆ.
 ಬಿಜೆಪಿಯ ಡಿವಿಎಸ್ ಒಂದು ಬಾರಿ ಸ್ಪರ್ಧಿಸಿ ಗೆದ್ದು ಉಡುಪಿಗೆ ವಲಸೆಹೋಗಿದ್ದರು. ಇದೀಗ ಅಲ್ಲಿಂದ ಬೆಂಗಳೂರು ಉತ್ತರಕ್ಕೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಜಿಲ್ಲೆಯ ಮಂಜುನಾಥ ಭಂಡಾರಿ ಹೈಕಮಾಂಡ್ ಶಿಫಾರಸಿನಂತೆ ಶಿವಮೊಗ್ಗದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.
ಹೊಸಮುಖ: ಠೇವಣಿ ಕಳೆದುಕೊಳ್ಳುವುದು ಗ್ಯಾರಂಟಿ ಎಂಬ ಕಾರಣಕ್ಕೆ ಜೆಡಿಎಸ್ ಮತ್ತು ಸಿಪಿಐಎಂನಲ್ಲಿ ಪ್ರತಿ ಬಾರಿಯೂ ಸ್ಪರ್ಧೆಗೆ ಹೊಸ ಮುಖಗಳೇ ಸ್ಪರ್ಧೆಗೆ ಇಳಿಯುತ್ತಿವೆ.
1952ರಲ್ಲಿ ಮೊದಲ ಚುನಾವಣೆ ನಡೆದಾಗ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಮೊದಲ ಸಂಸದ ಶ್ರೀನಿವಾಸ ಮಲ್ಯರು. 1957ರಲ್ಲಿ ಕ್ಷೇತ್ರವೇ ಕರ್ನಾಟಕಕ್ಕೆ ವಲಸೆ ಬಂತು!
ಎತ್ತಿನಹೊಳೆ ನಂಟು: ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಎತ್ತಿನಹೊಳೆ ವಿವಾದ ಸುತ್ತಿಕೊಂಡಿದೆ. ಬಿಜೆಪಿ ಸರ್ಕಾರದಲ್ಲಿ ಡಿ.ವಿ.ಎಸ್. ಮುಖ್ಯಮಂತ್ರಿಯಾಗಿದ್ದಾಗ ಅನುಮೋದನೆ ನೀಡಿದರು. ಎತ್ತಿನಹೊಳೆ ಯೋಜನೆಗೆ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಒತ್ತು ನೀಡಿದವರು ಎನ್ನುವುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement