ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅನುಮತಿರಹಿತ ಆಪ್ ರೋಡ್‌ಶೋ: ಪ್ರಚಾರ ವಾಹನ ಮುಟ್ಟುಗೋಲು

Rashmi Kasaragodu
Updated On : 21 Mar 2014, 12:58 pm

ಮಂಗಳೂರು: ಆಪ್ ಸ್ಥಾಪಕ ಕೇಜ್ರಿವಾಲ್ ಶೈಲಿಯಲ್ಲಿಯೇ ಅನುಮತಿ ಇಲ್ಲದೆ ರೋಡ್ ಶೋ ನಡೆಸಲು ಮುಂದಾದ ಆಮ್ ಆದ್ಮಿ ಕಾರ್ಯಕರ್ತರ ಪ್ರಚಾರ ವಾಹನವನ್ನು ಸುರತ್ಕಲ್ ಪೊಲೀಸರು ಮುಟ್ಟುಗೋಲು ಹಾಕಿಕೊಂಡರು. ವಾಹನದಲ್ಲಿದ್ದ ಇಬ್ಬರು ಕಾರ್ಯಕರ್ತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.
 ಎಂ.ಆರ್. ವಾಸುದೇವ, ರೋಹನ್ ಸಿರಿ, ಚುನಾವಣೆ ಪ್ರಚಾರ ಸಮಿತಿಯ ರಕ್ಷಿತ್ ಶೆಟ್ಟಿ ಮತ್ತಿತತರ ಕಾರ್ಯಕರ್ತರು ಸುರತ್ಕಲ್‌ನಲ್ಲಿ ಗುರುವಾರ ರೋಡ್ ಶೋ ಪ್ಲಾನ್ ಮಾಡಿದ್ದರು. ಅದರಂತೆ ವಾಹನಕ್ಕೆ ಧ್ವನಿವರ್ಧಕ ಹಾಕಿ ಪ್ರಚಾರಕ್ಕೆ ಹೋಗುತ್ತಿದ್ದ ವೇಳೆ ಚುನಾವಣಾ ಸೆಕ್ಟರ್ ಅಧಿಕಾರಿಗಳ ದೂರಿನಂತೆ ಆಗಮಿಸಿದ ಸುರತ್ಕಲ್ ಪೊಲೀಸರು ವಾಹನ ಮುಟ್ಟುಗೋಲು ಹಾಕಿದ್ದಾರೆ.   ಮೈಕ್ ಪರವಾನಗಿ ಇಲ್ಲದೆ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಚುನಾವಣೆ ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ವಾಹನ ಮುಟ್ಟುಗೋಲು ಹಾಕಿದ್ದೇವೆ. ಕೋರ್ಟ್ ಅನುಮತಿ ಪಡೆದು ಕೇಸ್ ದಾಖಲಿಸುತ್ತೇವೆ ಎಂದು ಸುರತ್ಕಲ್‌ಪೊಲೀಸರು ತಿಳಿಸಿದ್ದಾರೆ.
ಟೆಸ್ಟ್ ಮಾಡಿದ್ದು: ನಾವು ಪ್ರಚಾರ ವಾಹನಕ್ಕೆ ಧ್ವನಿವರ್ಧಕ ಅಳವಡಿಸಿದ್ದೆವು. ಪ್ರಚಾರ ಆರಂಭಿಸಿರಲಿಲ್ಲ. ಧ್ವನಿವರ್ಧಕ ಟೆಸ್ಟ್ ಮಾಡುತ್ತಿದ್ದಾಗ ಪೊಲೀಸರು ವಾಹನ ಮುಟ್ಟುಗೋಲು ಹಾಕಿದ್ದಾರೆ ಎಂದು ಆಪ್ ಮುಖಂಡ ನಂದಗೋಪಾಲ್ ಸ್ಪಷ್ಟನೆ ನೀಡಿದ್ದಾರೆ.
ಬಸ್‌ನಲ್ಲಿ ಪ್ರಚಾರ!: ಆಮ್ ಆದ್ಮಿ ಅಭ್ಯರ್ಥಿ ವಿಮಾನ ನಿಲ್ದಾಣ ಪ್ರಾಧಿಕಾರ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ ಗುರುವಾರ ಸರ್ವಿಸ್ ಬಸ್‌ನಲ್ಲಿ ಹಳೆಯಂಗಡಿಗೆ ತೆರಳಿ ಅಕ್ಕ, ಪಕ್ಕ ಪ್ರಚಾರ ಮಾಡುವ ಮೂಲಕ ತಾವು ಸರಳರು ಎಂದು ಜನರಿಗೆ ತೋರ್ಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement