ಬಾಲಕಿ ಮೇಲೆ ಭಾವನಿಂದಲೇ ಅತ್ಯಾಚಾರ
ಉಪ್ಪಿನಂಗಡಿ: ಮನೆಗೆ ಮಲಗಲು ಬರುತ್ತಿದ್ದ, ಪಕ್ಕದ ಮನೆಯ ನಿವಾಸಿ, ಮಾವನ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ ಘಟನೆ ಕೌಕ್ರಾಡಿ ಗ್ರಾಮದ ಬದಿಯಡ್ಕದಲ್ಲಿ ನಡೆದಿದೆ.
ನೆರೆಮನೆಯಲ್ಲಿದ್ದ ಅತ್ತೆಯ ಮನೆಗೆ ರಾತ್ರಿ ವೇಳೆ ಮಲಗಲು ಹೋಗುತ್ತಿದ್ದ 17 ವರ್ಷದ ಬಾಲಕಿ ಮೇಲೆ ಆಕೆಯ ಆತ್ತೆಯ ಮಗ ಅತ್ಯಾಚಾರ ನಡೆಸಿದ್ದಾರೆ. ಈತ ಕುಡಿತದ ಚಟ ಹೊಂದಿದ್ದು, ಮನೆಗೆ ಬರುವಾಗ ಕುಡಿದು ಬರುವುದಲ್ಲದೆ, ತಾಯಿಗೂ ಮದ್ಯ ಕುಡಿಸಿ ಬಾಲಕಿ ಮೇಲೆ ಸತತವಾಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ವಿಷಯ ಬಹಿರಂಗ ಪಡಿಸಿದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಪರಿಣಾಮ ಬಾಲಕಿ ಗರ್ಭವತಿಯಾಗಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.