ಕರ್ಣಾಟಕ ಬ್ಯಾಂಕ್ ಇನ್ನೂ 22 ಶಾಖೆ
ಮಂಗಳೂರು: ಕರ್ಣಾಟಕ ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ಒಟ್ಟು 550 ಶಾಖೆಗಳನ್ನು ತೆರೆದಿದೆ. ಮಾರ್ಚ್ ಅಂತ್ಯಕ್ಕೆ 600 ಶಾಖೆ ತೆರೆಯುವ ಗುರಿ ಹಾಕಿಕೊಂಡಿದ್ದು, ಇನ್ನೂ 22 ಹೊಸ ಶಾಖೆ ತೆರೆಯಲಿದೆ. ಈ ಬ್ಯಾಂಕ್ 20 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್ ರಹಿತ ಪ್ರದೇಶದಲ್ಲಿ 13 ಹಣಕಾಸು ನಿರ್ವಹಣೆಯ ಶಾಖೆ ಹಾಗೂ 17 ಸಣ್ಣ ಶಾಖೆಗಳನ್ನು ತೆರೆಯಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.