ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಸಹಜ ಸಾವು: ಕೊಲೆ ಶಂಕೆ

Mainashree
Updated On : 29 Mar 2014, 10:44 am

ಮಂಗಳೂರು: ಬಂಟ್ಸ್ ಹಾಸ್ಟೇಲ್ ಸಮೀಪದ ಡಾನ್ ಬಾಸ್ಕೋ ಹಾಲ್ ಎದುರು ಇತ್ತೀಚೆಗೆ ಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಅಸಹಜ ಸಾವು ಕೊಲೆ ಪ್ರಕರಣ ಎಂಬ ಶಂಕೆ ವ್ಯಕ್ತವಾಗಿದೆ.
ಮಾ. 23ರಂದು ಡಾನ್ ಬಾಸ್ಕೋ ಹಾಲ್ ಎದುರು ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಕುಶಲ ಎಂಬಾಕೆ ಅದು ತನ್ನ ಗಂಡ ಎಂ.ಆರ್. ಕುಮಾರ್ ಎಂದು ಪತ್ತೆ ಹಚ್ಚಿದ್ದರು.
ಎಂ.ಆರ್. ಕುಮಾರ್ ರಿಕ್ಷಾ ಸ್ವಂತ ಓಡಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ದಲ್ಲಾಳಿಯಾಗಿ ಕೆಲಸ ಮಾಡಿಕೊಂಡಿದ್ದರು.
ಮಾ. 22ರಂದು ಮೂಡುಬಿದಿರೆಯ ನಾದಿನಿ ಮನೆಗೆ ಟಿಪ್ಪರ್ ಚಾಲನಾ ತರಬೇತಿಗೆಂದು ಹೋಗಿದ್ದ ಎಂ.ಆರ್. ಕುಮಾರ್‌ಗೆ ದಾರಿ ಮಧ್ಯೆ ಸ್ನೇಹಿತ ಆ್ಯಂಡ್ರೂ ಎಂಬವರ ಕರೆ ಬಂದಿದೆ. ಬಳಿಕ 23ರಂದು ಡಾನ್ ಬಾಸ್ಕೋ ಎದುರು ಎಂ.ಆರ್. ಕುಮಾರ್ ಶವ ಅಸಹಜ ರೀತಿಯಲ್ಲಿ ಪತ್ತೆಯಾಗಿತ್ತು. ರಿಯಲ್ ಎಸ್ಟೇಟ್ ವಿಚಾರದಲ್ಲಿ ಕರೆ ಮಾಡಿದ್ದ ಆತನ ಸ್ನೇಹಿತನೇ ಕೊಲೆ ಮಾಡಿರುವುದಾಗಿ ಮೃತನ ಪತ್ನಿ ಕುಶಲ ಬಂದರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಶವ ಪತ್ತೆ
ಮಂಗಳೂರು: ಕಾವೂರು ಕಲ್ಲಗುಡ್ಡೆ ಎಂಬಲ್ಲಿ ಮಾ. 22 ರಂದು 35 ವರ್ಷ ವಯೋವಾನದ ಅಪರಿಚಿತ ಮಹಿಳೆಯ ಶವ ದೊರಕಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಣ್ಣೆ ಕಪ್ಪು ಮೈ ಬಣ್ಣ, ದಪ್ಪ ಶರೀರ ಹೊಂದಿದ್ದು, ಸೀರೆ ಮತ್ತು ಬಿಳಿ ರವಿಕೆ ಧರಿಸಿದ್ದಾರೆ.
ಮದ್ಯಪಾನ ಚಟ ಇದ್ದು, ಮೃತದೇಹದಲ್ಲಿ ಮದ್ಯದ ಬಾಟಲಿ, ತಂಬಾಕು ಪ್ಯಾಕೇಟ್ ದೊರೆತಿದೆ.
ಅಪರಿಚಿತ ವ್ಯಕ್ತಿಗೆ ಗಾಯ
ಮಂಗಳೂರು: ನಗರದ ಲ್ಯಾಂಡ್ ಮಾರ್ಕ್ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ 50 ವರ್ಷ ಪ್ರಾಯದ ಅಪರಿಚಿತ ಮೂಗ ವ್ಯಕ್ತಿ ವೆನ್‌ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸಂಬಂಧಪಟ್ಟವರು ಸಂಪರ್ಕಿಸುವಂತೆ ಕದ್ರಿ ಸಂಚಾರ ಪೂರ್ವ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಮಂಗಳೂರು: ಬಜ್ಪೆ ಮೂಳೂರು ಗ್ರಾಮದ ನಿವಾಸಿ, ಮಾನಸಿಕ ಅಸ್ವಸ್ಥ ಶೇಖರ ಪೂಜಾರಿ(41) ಮಾ. 8 ರಂದು ಅಂಗಡಿಗೆಂದು ಮನೆಯಿಂದ ತೆರಳಿದವರು, ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
ಗೋಧಿ ಮೈ ಬಣ್ಣ, ಸಾಧಾರಾಣ ಮೈಕಟ್ಟು ಹೊಂದಿದ್ದು, ಕನ್ನಡ, ತುಳು, ಹಿಂದಿ, ಗುಜರಾತಿ ಮಾತನಾಡುತ್ತಾರೆ. ಹಸಿರು ಬಣ್ಣದ ಟೀ ಶರ್ಟ್, ಕುತ್ತಿಗೆಗೆ ಕಪ್ಪು ಬಣ್ಣದ ನೂಲು ಧರಿಸಿರುತ್ತಾರೆ. ಪ್ರಕರಣ ಬಜ್ಪೆ ಠಾಣೆಯಲ್ಲಿ ದಾಖಲಾಗಿದೆ.
ಕೋಟೆಕಾರು ಗ್ರಾಮದ ಬೀರಿ ನಿವಾಸಿ ಸುಜಿತ್ ಕುಮಾರ್(36) ಮಾ. 18 ರಂದು ಮನೆಯಿಂದ ಹೊರಟು ನಾಪತ್ತೆಯಾಗಿರುತ್ತಾರೆ.
ಸಾಧಾರಣ ಶರೀರ, ಬಿಳಿ ಮೈಬಣ್ಣ ಹೊಂದಿದ್ದು, ಕಪ್ಪು ಪ್ಯಾಂಟ್ ಮತ್ತು ಬಿಳಿ ಅರ್ಧ ತೋಳಿನ ಅಂಗಿ ಧರಿಸಿರುತ್ತಾರೆ. ತುಳು, ಕನ್ನಡ, ಇಂಗ್ಲಿಷ್, ಹಿಂದಿ ಮಾತನಾಡುತ್ತಾರೆ. ಪತ್ತೆಯಾದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪುಣಚ: ಗರ್ಭಿಣಿ ಆತ್ಮಹತ್ಯೆ
ವಿಟ್ಲ: ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣಚ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.  ಪುಣಚ ಗ್ರಾಮದ ಕೋಡಿ ಲಿಯೋ ಡಿಸೋಜಾ ಅವರ ಪತ್ನಿ ಸವಿತಾ (22) ಮೃತ ದುರ್ದೈವಿ. ಕಾಸರಗೋಡು ಜಿಲ್ಲೆಯ ಸವಿತಾ ಅವರನ್ನು ಕೋಡಿ ದಜರ್ ಡಿಸೋಜ ಅವರ ಮಗ ಲಿಯೊ ಡಿಸೋಜಾ 2013 ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಸವಿತಾ 4 ತಿಂಗಳ ಬಸುರಿಯಾಗಿದ್ದು, ಶುಕ್ರವಾರ ಮಧ್ಯಾಹ್ನ ಗಂಡ ಪುತ್ತೂರಿಗೆ ಹೋಗಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆ ಬಸುರಿ, ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ ಎಂದು ಆಕೆಯ ಹೆತ್ತವರು ಪೊಲೀಸರಿಗೆ ಹೇಳಿಕೆ ನೀಡಿದ್ದು, ತಹಸೀಲ್ದಾರ್, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ ಮಿಸ್ತ್ರಿ, ವಿಟ್ಲ ಉಪ ನಿರೀಕ್ಷಕ ರಾಘವೇಂದ್ರ ಟಿ.ಆರ್. ಸ್ಥಳಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement