ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಡು ಪ್ರಾಣಿ ಬೇಟೆ: ಓರ್ವ ಬಂಧನ

Mainashree
Updated On : 29 Mar 2014, 10:43 am

ಸುಬ್ರಹ್ಮಣ್ಯ: ಮಡಿಕೇರಿ- ಸುಳ್ಯ ಗಡಿ ಭಾಗವಾದ ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ವನ್ಯ ಪ್ರಾಣಿ ಬೇಟೆಯಲ್ಲಿ ತೊಡಗಿದ್ದ ತಂಡದ ಮೇಲೆ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಓರ್ವನನ್ನು ಬಂಧಿಸಿ, ನ್ಯಾಯಾಲಕ್ಕೆ ಹಾಜರುಪಡಿಸಿರುವ ಘಟನೆ ಶುಕ್ರವಾರ ನಡೆದಿದೆ.
ಮಡಿಕೇರಿ ಮೂಲದ ಮೇಕೇರಿ ಗ್ರಾಮದ ಬೆನ್ನಿ ಎಂಬಾತನ್ನು ದಸ್ತಗಿರಿ ಮಾಡಿ ಆತನಿಂದ ಗುಂಡೇಟಿನಿಂದ ಸತ್ತಿರುವ ಹಾರುವ ಅಳಿಲು, ಕಡವೆ ಕೊಂಬು ಬೇಟೆ ಉಪಯೋಗಿಸುವ ಕೇಬಲ್, ಕತ್ತಿ, ಉರುಳು ಬಲೆ, ಮೊಬೈಲ್ ಸೆಟ್‌ಗಳನ್ನು ವಶಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಡಿಕೇರಿ ಮೂಲದವರು ಎನ್ನಲಾದ ಇವರು ವನ್ಯ ಪ್ರಾಣಿ ಬೇಟೆ ಹರಳುಕಲ್ಲು ಮುಂತಾದ ದಂಧೆಯಲ್ಲಿ ತೊಡಗಿರುವ ತಂಡವಾಗಿದ್ದು, ಹಲವಾರು ದಿನಗಳಿಂದ ಕಿರಿಭಾಗ ಮೀಸಲು ಅರಣ್ಯದ ಕಾಡಿನಲ್ಲಿ ಉಪ್ಪುಕಳ ಸುಟ್ಟತ್ ಮಲೆ ಎಂಬಲ್ಲಿ ಬಿಡಾರ ಹೂಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣು ತಪ್ಪಿಸಿ ವನ್ಯ ಜೀವಿ ಬೇಟೆ ಹಾಗೂ ಹರಳುಕಲ್ಲು ದಂಧೆಯಲ್ಲಿ ತೊಡಗಿರುವ ವಿಚಾರ ತಿಳಿದು ಬಂದ ತಕ್ಷಣ ಸುಬ್ರಹ್ಮಣ್ಯ ವಲಯ  ಅರಣ್ಯಾಧಿಕಾರಿ ನಿರ್ಮಲ ಮತ್ತು ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು. ಪ್ರಕರಣವನ್ನು ಕೊಲ್ಲಮೊಗ್ರ ಸೆಕ್ಷನ್ ಅಧಿಕಾರಿ ಮಂಜುನಾಥ್ ಕಾಂಬ್ಳೆ ದಾಖಲಿಸಿದರು.
ಮಡಿಕೇರಿ ಮೂಲದ ಕುಖ್ಯಾತ ಗ್ಯಾಂಗ್‌ನವರು ಗಾಳಿಬೀಡು, ಕೂಜುಮಲೆ, ಸುಟ್ಟತ್‌ಮಲೆ ಅರಣ್ಯ ಪ್ರದೇಶದಲ್ಲಿ ಬಿಡಾರ ಹೂಡಿ ಅವ್ಯವಹಿತವಾಗಿ ವನ್ಯ ಜೀವಿ ಬೇಟೆ, ಹರಳುಕಲ್ಲು ದಂಧೆಯಲ್ಲಿ ತೊಡಗಿಕೊಂಡಿದ್ದು ವ್ಯವಸ್ಥಿತವಾಗಿ ಅರಣ್ಯ ಸಂಪತ್ತು ಹಾಗೂ ವನ್ಯ ಪ್ರಾಣಿಗಳ ಚರ್ಮ, ಕೊಂಬು ಇತ್ಯಾದಿಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಕೊಂಡಿರುವುದು ತಿಳಿದು ಬಂದಿದೆ.
ಅರಣ್ಯ ಇಲಾಖೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಿ ಕೃತ್ಯದಲ್ಲಿ ತೊಡಗಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಈ ದಂಧೆಕೋರರಿಗೆ ಸುಳ್ಯ ಹಾಗೂ ಮಡಿಕೇರಿ ಪ್ರಭಾವಿ ರಾಜಕಾರಣಿಗಳ ಬೆಂಬಲವಿರುವುದರಿಂದ ನಿರಂತರವಾಗಿ ಅರಣ್ಯ ಲೂಟಿ ನಡೆಸಲು ಅನೂಕೂಲವಾಗಿದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement