'ಕೈ'ಗಳಿಗೆ ನಾಚಿಕೆಯಾಗಬೇಕು
ಬೇಲೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಧರ್ಮ ಮತ್ತು ಜಾತಿಗಳನ್ನು ಒಡೆದು ಆಳುವ ಪ್ರವೃತ್ತಿ ಮಾಡಿಕೊಂಡು ದೇಶಕ್ಕೆ ಮಾರಕ ಸಂದೇಶ ನೀಡಿರುವ ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದರು. ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಾದಿ ಭಾಗ್ಯ ಯೋಜನೆ ಮೂಲಕ ಧರ್ಮ- ಧರ್ಮಗಳ ಮಧ್ಯೆ ಕಂದಕ ಉಂಟು ಮಾಡಿದ್ದಾರೆ ಎಂದರು.