ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿರಾಡಿ ಕಾಡು ಧಗಧಗ

Mainashree
Updated On : 29 Mar 2014, 10:42 am

ಉಪ್ಪಿನಂಗಡಿ: ಶಿರಾಡಿ, ಶಿಶಿಲ ಅಭಯಾರಣ್ಯಗಳಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಶಿರಾಡಿ ಗ್ರಾಮದ ಅಡ್ಡೋಳೆ ಕಾಡಿನಲ್ಲಿ ಗುರುವಾರ ಮಧ್ಯಾಹ್ನದಿಂದ ಮತ್ತೆ ಬೆಂಕಿಯ ಕೆನ್ನಾಲಗೆ ಕಾಣಿಸಿಕೊಂಡು ಭಾರಿ ಪ್ರಮಾಣದಲ್ಲಿ ಕಾಡಿನ ಸಂಪತ್ತು ಅಗ್ನಿಗಾಹುತಿಯಾಗಿದೆ.
 ರಾ.ಹೆ.75ರಲ್ಲಿ ಕಾಣಿಸುವಂತಹ ಪ್ರದೇಶದಲ್ಲೇ ಕಾಡ್ಗಿಚ್ಚು ಮೂಡಿದ್ದು, ಸುಡು ಬಿಸಿಲಿನ ಪ್ರಖರತೆಗೆ ಸಿಲುಕಿ ಭಾರಿ ಬೆಂಕಿಯ ಕೆನ್ನಾಲಗೆ ಮೇಲೆದ್ದು ಪಸರಿಸಲಾರಂಬಿಸಿತ್ತು. ಪರಿಣಾಮ ಕಾಡಿನಲ್ಲಿದ್ದ ಅನೇಕ ಪ್ರಾಣಿ ಸಂಕುಲಗಳು ಜೀವ ಕಳೆದುಕೊಂಡಿರುವ ಸಾಧ್ಯತೆಯಿದೆ.
 ಮಧ್ಯಾಹ್ನ ಕಾಣಿಸಿಕೊಂಡ ಕಾಡ್ಗಿಚ್ಚು ರಾತ್ರಿಯಾದರೂ ನಿಯಂತ್ರಣಕ್ಕೆ ಬಾರದೆ ಮುಂದುವರಿದಿದ್ದು, ಕಾಡಿನ ಬೆಲೆಬಾಳುವ ಮರಗಳು, ಕಾಡು ಪ್ರಾಣಿಗಳು ಅಗಾಧ ಪ್ರಮಾಣದಲ್ಲಿ ಬೆಂಕಿಗಾಹುತಿಯಾಗಿರಬಹುದಾದ ಶಂಕೆ ಮೂಡಿದೆ.
 ಕಾಡ್ಗಿಚ್ಚಿನ ಮಾಹಿತಿ ತಿಳಿದಾಕ್ಷಣ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಶ್ರೀಹರ್ಷ ನೇತೃತ್ವದ ಅರಣ್ಯ ಇಲಾಖೆ ತಂಡ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದು, ಹೆಚ್ಚಿನ ಪ್ರದೇಶಕ್ಕೆ ಬೆಂಕಿ ವ್ಯಾಪಿಸದಂತೆ ಸಾಧ್ಯವಿರುವ ಕ್ರಮಗಳನ್ನೆಲ್ಲ ಅನುಷ್ಠಾನಿಸಿದ್ದಾರೆ.
25 ಎಕ್ರೆಗೂ ಹೆಚ್ಚು ಅರಣ್ಯ, ಜೀವ ಸಂಕುಲ ಭಸ್ಮ: ಸುಮಾರು 25 ಎಕ್ರೆಗಿಂತಲೂ ಹೆಚ್ಚಿನ ಕಾಡು ಅಗ್ನಿಗಾಹುತಿಯಾಗಿದೆ ಎಂದು ತಿಳಿಸಿರುವ ವಲಯ ಅರಣ್ಯಾಧಿಕಾರಿ, ಗರಿಷ್ಠ ಪ್ರಯತ್ನದೊಂದಿಗೆ ಕಾಡ್ಗಿಚ್ಚನ್ನು ನಿಯಂತ್ರಿಸಲು ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement