ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಕುಮಾರ್ ಮೋಹನ್‌ಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ

Mainashree
Updated On : 29 Mar 2014, 10:43 am

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದಿಂದ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ಹೆಸರಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಕೊಡಮಾಡುವ ಸುವರ್ಣ ರಂಗ ಸಮ್ಮಾನ್ ರಾಷ್ಟ್ರೀಯ ಪ್ರಶಸ್ತಿಗೆ ರಂಗಕರ್ಮಿ ಸುಕುಮಾರ ಮೋಹನ್ ಆಯ್ಕೆಯಾಗಿದ್ದಾರೆ.
ಕಾರ್ಕಳ ಸಮೀಪದ ಮುದ್ರಾಡಿಯನ್ನು ನಾಟ್ಕದೂರು ಆಗಿಸಿದ ಸುಕುಮಾರ್ ಮೋಹನ್ ತನ್ನ ಮನೆಯ ಸದಸ್ಯರೆಲ್ಲರನ್ನೂ ರಂಗಭೂಮಿಗೆ ಕರೆತಂದರು, ಮನೆಯನ್ನು ನಾಟಕದ ಮನೆಯನ್ನಾಗಿಸಿದರು.
ನಟನೆ ಹಾಗೂ ನಿರ್ದೇಶನದಲ್ಲಿ ಅನನ್ಯತೆ ನಿರೂಪಿಸುತ್ತ ಹಲವು ಬಹುಮಾನ, ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಿರಿ ಸಂಪಿಗೆ, ಸಾಹೇಬರು ಬರುತ್ತಾರೆ, ಹುಲಿಯ ನೆರಳು, ವಾಲಿ, ದಂಗೆಯ ಮುಂಚಿನ ದಿನಗಳು, ನಾ ತುಕಾರಾಮ ಅಲ್ಲ, ಪಿಲಿಪತ್ತಿ ಗಡಸ್, ಕಾಳಾಪುರದ ಕಿಲೆಸಿ...ಹೀಗೆ ಕನ್ನಡ ಹಾಗೂ ತುಳು ರಂಗಭೂಮಿಗೆ ರಂಗಕೃತಿಗಳನ್ನು ಕೊಡಮಾಡಿದ್ದಾರೆ. ಪ್ರತಿ ವರ್ಷ ಎರಡು ನಾಟಕಗಳನ್ನು ಸಿದ್ಧಪಡಿಸುವುದು, ನಾಡಿನ ಬಹುಮುಖ್ಯ ತಂಡಗಳನ್ನು ಮುದ್ರಾಡಿಗೆ ಆಹ್ವಾನಿಸುವುದರಲ್ಲಿ ಅವರು ರಂಗಸುಖ ಕಾಣುತ್ತಾರೆ. ಹೈದರಾಬಾದ್‌ನ ಸುರಭಿ ನಾಟಕ ತಂಡವು ಬೇರೆ ಯಾವ ತಂಡವನ್ನೂ ತನ್ನ 150 ವರ್ಷದ ಇತಿಹಾಸದಲ್ಲಿ ತಮ್ಮಲ್ಲಿಗೆ ಆಹ್ವಾಣಿಸದೇ ಇದ್ದ ದಾಖಲೆ ಮುರಿದಂತೆ 'ನಮ ತುಳುವೆರ್‌'ನ್ನು ಆಹ್ವಾನಿಸಿ ಇತ್ತೀಚೆಗೆ ಅಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿದೆ.
ಡಿ.ಕೆ.ಚೌಟರ ತುಳು ನಾಟಕ ಪಿಲಿಪತ್ತಿ ಗಡಸ್ ನಾಟಕ ಇವರ ನಿರ್ದೇಶನದಲ್ಲಿ 160 ಪ್ರದರ್ಶನ ಕಂಡಿದೆ.
30ರಂದು ಪ್ರದಾನ: ಪ್ರಶಸ್ತಿಯನ್ನು ಭಾನುವಾರ ಬೆಳಗ್ಗೆ 10.30ಕ್ಕೆ ಕಾಂತಾವರ ಕನ್ನಡ ಸಂಘದಲ್ಲಿ ಪ್ರದಾನ ಮಾಡಲಾಗುವುದು. ಸಂಘದ ಅಧ್ಯಕ್ಷ ಡಾ. ನಾ. ಮೊಗಸಾಲೆ ಪ್ರಶಸ್ತಿ ನೀಡುವರು. ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಸಿ.ಕೆ. ಪಡಿವಾಳ್ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement