ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚೂರಿ ಇರಿದ ಆರೋಪಿಗೆ ನ್ಯಾಯಾಂಗ ಬಂಧನ

Rashmi Kasaragodu
Updated On : 2 May 2014, 12:30 pm

ಸುಳ್ಯ: ಕಾಂಗ್ರೆಸ್ ನಾಯಕಿ ವಹಿದಾ ಮತ್ತವರ ಪತ್ನಿ ಇಸ್ಮಾಯಿಲ್ ನೇಲ್ಯಮಜಲು ಅವರಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಆರೋಪಿ ಎಂ.ಆರ್. ಸಿದ್ದೀಕ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸುಳ್ಯದ ಅಲ್ಪಸಂಖ್ಯಾತರ ಸೊಸೈಟಿ ಬಳಿ ದಂಪತಿಗೆ ಚೂರಿಯಿಂದ ಇರಿದ ಸಿದ್ದೀಕ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಗುರುವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ತೀವ್ರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ  ವಹೀದಾ ಹಾಗೂ ಇಸ್ಮಾಯಿಲ್ ಆರೋಗ್ಯಸ್ಥಿತಿ ಸುಧಾರಣೆ ಕಂಡಿದೆ.
ಕೊಲ್ಲಲೆಂದೇ ಹೊಂಚು ಹಾಕುತ್ತಿದ್ದ: ಕಾಂಗ್ರೆಸ್ ಮುಖಂಡರೂ ಆಗಿರುವ ಇಸ್ಮಾಯಿಲ್ ನೇಲ್ಯಮಜಲು ಅವರುನ್ನು ಕೊಲ್ಲಲು ಆರೋಪಿ ಸಿದ್ದೀಕ್ ಹಲವು ದಿನಗಳಿಂದ ಸ್ಕೆಚ್ ಹಾಕುತ್ತಿದ್ದ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಬೆಳ್ಳಾರೆಯ ಎಂ.ಆರ್. ರಹಿಮಾನ್ ಹಾಗೂ ಸಿದ್ದೀಕ್ ಸಹೋದರರಿಗೂ ಇಸ್ಮಾಯಿಲ್ ಗುಂಪಿನವರಿಗೂ ಹಲವು ವರ್ಷಗಳಿಂದ ದ್ವೇಷವಿತ್ತು. ಈ ಹಿನ್ನೆಲೆಯಲ್ಲಿಯೇ ಈತ ಇಸ್ಮಾಯಿಲ್ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಗೋವಾದಲ್ಲಿ ಸುಮಾರು 10 ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದ ಸಿದ್ದೀಕ್ ಲೋಕಸಭಾ ಚುನಾವಣೆಗೆಂದು ಊರಿಗೆ ಬಂದಿದ್ದ. ಆ ಬಳಿಕ ಇಸ್ಮಾಯಿಲ್ ಅವರನ್ನು ಹಿಂಬಾಲಿಸುತ್ತಲೇ ಇದ್ದನೆಂದೂ ಇತ್ತೀಚೆಗೆ ಮಂಗಳೂರಿನಲ್ಲಿ ಹತ್ಯೆಗೈಯುವ ಪ್ರಯತ್ನ ವಿಫಲಗೊಂಡಿತೆಂದೂ ತನಿಖೆ ವೇಳೆ ತಿಳಿದುಬಂದಿದೆ. ವಹೀದಾ ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶ ಇರಲಿಲ್ಲ ಎಂದು ಸಿದ್ದೀಕ್ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾನೆ.
ಎಂ.ಆರ್. ಸಿದ್ದೀಕ್ ವಿರುದ್ಧ ಕೊಲೆ ಯತ್ನ ಪ್ರಕರಣ ಜೊತೆಗೆ ಮಾನಭಂಗ ಯತ್ನ ಕೇಸನ್ನೂ ದಾಖಲಿರುವ ಪೊಲೀಸರು ಕೊಲೆಯತ್ನಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆತನ ಸಹೋದರ ಎಂ.ಆರ್. ರಹಿಮಾನ್ ಮತ್ತು ಅಂದುಂಞ ಬೆಳ್ಳಾರೆ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement