ದನ ಮೇಯಿಸುತ್ತಿದ್ದ ವೃದ್ಧನ ಕೊಲೆ: ಛತ್ತೀಸ್ಗಢ ನಿವಾಸಿ ಸೆರೆ
ಮಂಗಳೂರು: ಪಡುಕೊಣಾಜೆ ನೂಯಿ ದರ್ಖಾಸ್ನಲ್ಲಿ ದನ ಮೇಯಿಸುತ್ತಿದ್ದ ವೃದ್ಧನನ್ನು ಕೊಲೆ ಮಾಡಿದ ಆರೋಪಿ ಛತ್ತೀಸ್ಗಢ ನಿವಾಸಿ ಜವಾಹರಲಾಲ್ ಭೋಗ್ (24) ಎಂಬಾತನನ್ನು ಬಂಧಿಸಿದ್ದಾರೆ.
ದರ್ಖಾಸಿನಲ್ಲಿ ದನ ಮೇಯಿಸುತ್ತಿದ್ದ ಸಂಜೀವ ಪೂಜಾರಿ (70) ಎಂಬವರು ಬುಧವಾರ ಕೊಲೆಯಾಗಿದ್ದರು.
ಜವಾಹರ್ ಬೋರ್ವೆಲ್ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮಾರೂರಲ್ಲಿ ಕೆಲಸ ಮಾಡುತ್ತಿದ್ದ ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ಈ ಕಾರಣಕ್ಕೆ ಇತರ ಕಾರ್ಮಿಕರು ಆತನನ್ನು ಕೆಲಸದಿಂದ ಓಡಿಸಿದ್ದರು.
ಹೀಗೆ ಕೆಲಸ ಕಳೆದುಕೊಂಡ ಜವಾಹರ್ ಗಂಟಾಲ್ಕಟ್ಟೆ ಕಡೆಗೆ ಬರುತ್ತಿದ್ದ. ಬಾಯಾರಿದ್ದ ಆತ ನೀರು ಬೇಕು ಎಂದು ಸುಲೇಮಾನ್ ಎಂಬವರ ಮನೆಗೆ ಹೋಗಿದ್ದ. ಅಲ್ಲಿ ಬಾಗಿಲು ಬಡಿದು ಮಹಿಳೆ ಮೇಲೆ ಹಲ್ಲೆ ನಡೆಸಿದ್ದ. ಅಲ್ಲಿಂದ ದರ್ಖಾಸ್ ಕಡೆಗೆ ಹೋಗುತ್ತಿದ್ದಾಗ ದನ ಮೇಯಿಸುತ್ತಿದ್ದ ಸಂಜೀವ ಪೂಜಾರಿ ಮಲಗಿದ್ದರು. ಅವರ ಬಳಿ ಇದ್ದನೀರಿನ ಬಾಟಲ್ ಎತ್ತಿಕೊಂಡ ಸಂದರ್ಭ ಸಂಜೀವ ಪೂಜಾರಿ ಅಕ್ಷೇಪಿಸಿ ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಜವಾಹರ್ ತನ್ನ ಕೈಯಲ್ಲಿದ್ದ ರಾಡ್ನಿಂದ ವೃದ್ಧನ ತಲೆಗೆ ಹೊಡೆದಿದ್ದು, ಗಂಭೀರ ಏಟು ತಗುಲಿ ಮೃತಪಟ್ಟಿದ್ದಾರೆ.
ಪೊಲೀಸರು ಬುಧವಾರ ರಾತ್ರಿಯಿಂದ ಆರೋಪಿ ಶೋಧಕ್ಕೆ ತೊಡಗಿದ್ದರು. ಗುರುವಾರ ಬೆಳಗ್ಗೆ 7 ಗಂಟೆಗೆ ಮೂಡುಬಿದರೆ ಕಲ್ಸಂಕ ಬಳಿ ರಕ್ತ ಸಿಕ್ತ ರಾಡ್ ಮತ್ತು ನೀರಿನ ಬಾಟಲಿ ಹಿಡಿದುಕೊಂಡು ಬರುತ್ತಿದ್ದ ಜವಾಹರ್ನನ್ನು ವಶಕ್ಕೆ ತೆಗೆದುಕೊಂಡರು. ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.