ನಾಪತ್ತೆಯಾದಾತ ಶವವಾಗಿ ಪತ್ತೆ
ಮಂಗಳೂರು: ನಾಪತ್ತೆಯಾಗಿದ್ದ ಜೆಪ್ಪು ನಿವಾಸಿ ಜುನೈದ್ ಶೇಕ್ (20) ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸಿಟಿ ಸೆಂಟರ್ನ ಲೈಫ್ಸ್ಟೈಲ್ನಲ್ಲಿ ಉದ್ಯೋಗಿಯಾಗಿದ್ದ ಶೇಕ್ ಏ.29ರಂದು ನಾಪತ್ತೆಯಾಗಿದ್ದರು. ಜುನೇದ್ ಕೊನೆಯದಾಗಿ ಸಹೋದರ ಸಂಬಂಧಿ ಸುಹೈಲ್ಗೆ ಕರೆ ಮಾಡಿದ್ದರು. ಮೋರ್ಗನ್ಗೇಟ್ ಮಳಿಗೆಯಲ್ಲಿರುವ ತನ್ನ ಎಟಿಎಂ ಕಾರ್ಡ್ ಪಡೆದು ವೇತನ ತೆಗೆದು ತನ್ನ ತಾಯಿಗೆ ನೀಡುವಂತೆ ಜುನೇದ್ ಸೂಚಿಸಿದ್ದರು. ಜುನೇದ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಗೆಳೆಯರು ಶಂಕಿಸಿದ್ದರು. ಮಗನ ಸಾವಿನಿಂದ ಹೆತ್ತವರು ಕಂಗಾಲಾಗಿದ್ದಾರೆ. ಯಾರ ಮೇಲೂ ಸಂಶಯ ಇಲ್ಲ ಎಂದು ಹೇಳಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.