ಬಾಬಾ ರಾಮ್ದೇವ್ ಬಂಧನಕ್ಕೆ ಆಗ್ರಹ: ನಾಳೆ ಪ್ರತಿಭಟನೆ
ಬಂಟ್ವಾಳ: ದಲಿತ ಮಹಿಳೆಯರನ್ನು ನಿಂದಿಸಿದ ಬಾಬಾ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಂಗ್ರೆಸ್ ಘಟಕದಿಂದ 3ರಂದು ಬಿ.ಸಿ. ರೋಡ್ನಲ್ಲಿ ಪ್ರತಿಭಟನೆ ನಡೆಯಲಿದೆ. ಅಪರಾಹ್ನ 3 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ದಲಿತ ಬಂಧುಗಳು ಹಾಗೂ ಸಮಾನ ಮನಸ್ಕರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಘಟಕದ ಪ್ರಕಟಣೆ ತಿಳಿಸಿದೆ