ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಯುವತಿ ನೇಣು ಬಿಗಿದು ಆತ್ಮಹತ್ಯೆ

Rashmi Kasaragodu
Updated On : 2 May 2014, 12:31 pm

ಉಡುಪಿ: ಇಲ್ಲಿನ ಮಾರ್ಪಳ್ಳಿ ಗ್ರಾಮದ ಕೊರಂಗ್ರಪಾಡಿ ಎಂಬಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
 ಮೃತ ಯುವತಿ ವಾಣಿ (25), ಈಕೆ ಇಲ್ಲಿನ ನಿವಾಸಿ ಕರಿಯ ನಾಯ್ಕ ಎಂಬವರ ಪುತ್ರಿ. ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೊಠಡಿ ಒಳಗೆ ಬಾಗಿಲು ಚಿಲಕ ಹಾಕಿ ಛಾವಣಿಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಳು. ತಕ್ಷಣ ಇದನ್ನು ಕಿಟಕಿಯಿಂದ ನೋಡಿದ ತಂದೆ ಕಿಟಕಿಯ ಮೂಲಕ ಕೋಲಿನಿಂದ ಬಾಗಿಲಿನ ಚಿಲಕ ತೆಗೆದು, ಒಳಗೆ ಹೋಗಿ ವಾಣಿಯನ್ನು ನೇಣಿನಿಂದ ಕೆಳಗೆ ಇಳಿಸಿದರು. ಆಗ ಅಕೆಯ ಮೈ ಬಿಸಿ ಇದ್ದು ಉಸಿರಾಡುತ್ತಿದ್ದಳು. ತಕ್ಷಣ ಸ್ಥಳೀಯರ ಸಹಾಯದಿಂದ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಯ ಪ್ರಾಣ ಹಾರಿ ಹೋಗಿತ್ತು.
ವಾಣಿ ಅವರ ಮದುವೆ ಇತ್ತೀಚೆಗೆ ನಿಶ್ಚಯವಾಗಿತ್ತು. ಆದರೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತಂದೆ ಕರಿಯ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement