ಮಂಗಳೂರು: ಪಾಂಡೇಶ್ವರ ಅಹ್ಮದಿಯಾ ಮುಸ್ಲಿಂ ಜಮಾ ಅತ್ ವತಿಯಿಂದ ಮೇ 3 ರಂದು ಪುರಭವನದಲ್ಲಿ 'ಪೀಸ್-2014' ವಿಚಾರ ಸಂಕಿರಣ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ಮಜ್ಲಿಸ್ ಖುದಮುಲ್ ಅಹ್ಮದಿಯ್ಯಾ ಅಧ್ಯಕ್ಷ ರಫೀಕ್ ಬೀಗ್ ಸಾಹೇಬ್ ಅವರು 'ಎಲ್ಲರೊಂದಿಗೆ ಪ್ರೀತಿ, ಯಾರೊಂದಿಗೂ ಧ್ವೇಷವಿಲ್ಲ' ಎಂಬ ವಿಷಯದ ಕುರಿತು ವೀಡಿಯೋ ಪ್ರೆಸೆಂಟೇಶನ್ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಬಿಯ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕ ಜೆ.ಆರ್. ಲೋಬೊ, ಮಹಾಬಲ ಮಾರ್ಲ, ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ, ಶ್ರೀ ಗುರು ಸಿಂಗ್ ಸಭಾ ಅಧ್ಯಕ್ಷ ಕಮಾಲ್ ಜಿತ್ ಸಿಂಗ್ ಪಾಲ್ಗೊಳ್ಳುವರು.