ಶಹೀದ್ ಹೇಳಿಕೆಗೆ ಬೆಳ್ಳಾರೆ ಕಾಂಗ್ರೆಸ್ ನಾಯಕರ ಖಂಡನೆ
ಸುಳ್ಯ: ಆರೋಪಿ ಸಿದ್ದೀಕ್ನ ಸಹೋದರ ರಹಿಮಾನ್ ಹಾಗೂ ವಹೀದಾ ದಂಪತಿ ನಡುವಿನ ವೈಮನಸ್ಸನ್ನು ಬಗೆಹರಿಸದೆ ರಹಿಮಾನ್ನನ್ನು ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದ ಕ್ರಮ ಹಾಗೂ ಹಲ್ಲೆಯನ್ನು ಖಂಡಿಸಿ ಟಿ.ಎಂ. ಶಹೀದ್ ನೀಡಿದ ಹೇಳಿಕೆಯನ್ನು ಬೆಳ್ಳಾರೆ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.
ಕೇವಲ ಸ್ವಯಂಘೋಷಿತ ನಾಯಕನಾಗಿರುವ ಶಹೀದ್ಗೆ ಬೆಳ್ಳಾರೆ ಕಾಂಗ್ರೆಸ್ ಮುಖಂಡರು ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ.
ಬೆಳ್ಳಾರೆಯಲ್ಲಿ ಪಕ್ಷಕ್ಕೆ ಯಾರನ್ನು ತೆಗೆದುಕೊಳ್ಳಬೇಕೆಂಬ ವಿವೇಚನೆ ಕಾಂಗ್ರೆಸ್ ಮುಖಂಡರಿಗಿದೆ. ಸುಳ್ಯದಲ್ಲಿ ವಹೀದಾ ಇಸ್ಮಾಯಿಲ್ ದಂಪತಿ ಮೇಲಿನ ಹಲ್ಲೆ ಖಂಡನೀಯ. ಇಂಥ ಕೃತ್ಯ ನಡೆಯಬಾರದಿತ್ತು ಎಂದು ಮುಖಂಡರಾದ ಚಂದ್ರಶೇಖರ ಕಾಮತ್ ಮತ್ತು ತಾಪಂ ಸದಸ್ಯ ಅನಿಲ್ ರೈ ಹೇಳಿಕೆಯಲ್ಲಿ ಖಂಡಿಸಿದ್ದಾರೆ.