ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಜ್ಪೆ ವಿಮಾನ ನಿಲ್ದಾಣ ಪ್ರಗತಿ ಕುಂಠಿತಕ್ಕೆ ಅಧಿಕಾರಿಗಳ ನಿರ್ಲಕ್ಷ ಕಾರಣ: ಐವನ್

Lingaraj Badiger
Updated On : 6 May 2014, 12:06 pm

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಗತಿ ಕುಂಠಿತಗೊಂಡಿದ್ದು, ಇದಕ್ಕೆ ಅಧಿಕಾರಿಗಳ ಮತ್ತು ಏರ್ಇಂಡಿಯಾ ಎಕ್ಸ್ಪ್ರೆಸ್ ಪ್ರಾಧಿಕಾರದ ನಿರ್ಲಕ್ಷದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರಚನಾ ಮಂಗಳೂರು ಅಧ್ಯಕ್ಷ ಐವನ್ ಡಿಸೋಜ ಆರೋಪಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮೇಲ್ದರ್ಜೆಗೆ ಏರಿಸಿದ ನಂತರ ಕೊಲ್ಲಿ ರಾಷ್ಟ್ರಗಳಿಗೆ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನ ಪ್ರಾರಂಭಿಸಿತ್ತು. ಮಂಗಳೂರು, ದುಬೈ, ಅಬುದಾಬಿ, ಮಸ್ಕತ್, ಕುವೈಟ್, ಸೌದಿ ಅರೇಬಿಯಾ, ದೋಹ, ಕತಾರ್ ಮತ್ತು ಬಹ್ರೈನ್ ರಾಷ್ಟ್ರಗಳಿಗೆ ಪ್ರಯಾಣಿಸಲಾಗುತ್ತಿತ್ತು ಎಂದರು. ದಿನಗಳೆದಂತೆ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲ್ಲಬೇಕಾದ ಸೌಕರ್ಯಗಳನ್ನು ನೀಡದೆ ನಿರಾಶೆಗೊಳಿಸಲು ಪ್ರಾರಂಭಿಸಿದ್ದು, ಸರಿಯಾದ ಸಮಯಕ್ಕೆ ಹಾರಾಟ ನಡೆಸದೆ ಏರ್ಇಂಡಿಯಾ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ನಿರ್ಲಕ್ಷಿಸುವ ಮೂಲಕ ನಿಲ್ದಾಣದ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.ವಾರಕ್ಕೆ ಮೂರು ಬಾರಿ ವಿಮಾನ ಸಂಚಾರವಿದ್ದು, ಎಲ್ಲ ಸಂದರ್ಭದಲ್ಲೂ ಕೂಡ ಮಂಗಳೂರಿಗೆ ನೀಡಲ್ಪಟ್ಟ 60 ಸೀಟುಗಳು ಭರ್ತಿಯಾಗುತ್ತಿತ್ತು. ಆದರೆ ಕ್ಯಾಲಿಕಟ್ನ ಮುಖಾಂತರ ಹಾರಾಟ ನಡೆಸುವ ವಿಮಾನವನ್ನು ಏಕಾಏಕಿ ರದ್ದುಗೊಳಿಸಲಾಯಿತು. ರು. 70 ಲಕ್ಷ ವೆಚ್ಚ ಖರ್ಚು ಮಾಡಿ ಕಾರ್ಗೋ ಡಿವಿಶನ್ ಕಟ್ಟಡವನ್ನು ನಿರ್ಮಿಸಿ, ತಿಂಗಳಲ್ಲಿ ರು. 1 ಲಕ್ಷ ಆದಾಯ ಗಳಿಸಲಾಗುತ್ತಿತ್ತು. ಜೆಟ್ ಏರ್ವೆಸ್ ವಿಮಾನವು ದಿನವೊಂದಕ್ಕೆ 1 ರಿಂದ 2 ಟನ್ ಸರಕು ಸಾಗಾಣೆ ಮಾಡುತ್ತಿತ್ತು. ಆದರೆ ಏರ್ಇಂಡಿಯಾ ಎಕ್ಸ್ಪ್ರೆಸ್ ಸರಕು ಸಾಗಾಣೆಯಲ್ಲಿ ಆಸಕ್ತಿ ವಹಿಸದ ಕಾರಣ ತಿಂಗಳಿಗೆ ರು. 30 ಸಾವಿರ ಆದಾಯ ಗಳಿಸುತ್ತಿದೆ. ರನ್ವೇ ವಿಸ್ತರಣೆ ಕಾರ್ಯಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಅಧಿಕಾರಿಗಳ ನಿರ್ಲಕ್ಷದಿಂದ ಇನ್ನೂ ಕಾರ್ಯಗತವಾಗಿಲ್ಲ. ಇಷ್ಟೆಲ್ಲಾ ನಿರ್ಲಕ್ಷ ಅಧಿಕಾರಿಗಳ ಲಾಬಿಯಿಂದ ಆಗುತ್ತಿದೆ. ಇಂಥ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ಸಿಗುವ ಸೌಕರ್ಯ ಒದಗಿಸುವಂತೆ ಪಕ್ಷ ರಹಿತವಾಗಿ ನಿಲ್ದಾಣದ ಮುಂಭಾಗ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement