ಸೊಳ್ಳೆ ನಿಯಂತ್ರಣಕ್ಕೆ ತುರ್ತು ಕ್ರಮ
ಮಂಗಳೂರು: ಮಳೆ ಬಳಿಕ ಸೊಳ್ಳೆ ಬೆಳವಣಿಗೆ ಜಾಸ್ತಿ ಆಗುವುದರಿಂದ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುವ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.
ಮನೆ ಮನೆ ಭೇಟಿ ನೀಡುವ ಮೂಲಕ ಸೊಳ್ಳೆ ಉತ್ಪತ್ತಿ ತಾಣ ಗುರುತಿಸಿ, ನಾಶ ಪಡಿಸಲು ಕ್ರಮ ಮತ್ತು ಮಾಹಿತಿ ಕಾರ್ಯಕ್ರಮ ನಡೆಸಲು ತಿಳಿಸಲಾಗಿದೆ.
ಮೇ 5ರಿಂದ 17ರವರೆಗೆ ಮತ್ತು ದ್ವಿತೀಯ ಹಂತದಲ್ಲಿ ಜೂ 2ರಿಂದ 12ರವರೆಗೆ ಯೋಜನೆ ರೂಪಿಸಲಾಗಿದೆ. ಮನೆ ಭೇಟಿ ಕಾರ್ಯದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರು ಮತ್ತು ಸಹಾಯಕರು, ಆಶಾ ಕಾರ್ಯಕರ್ತರು, ಸ್ವಯಂ ಸೇವಕರು, ಸ್ಥಳೀಯ ಪಂಚಾಯ್ತಿ ಚುನಾಯಿತಿ ಜನಪ್ರತಿನಿಧಿಗಳ ಸಹಕಾರ ಪಡೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ.