ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಟೀಲು: ಸಾಮೂಹಿಕ ಉಚಿತ ವಿವಾಹ ಸಂಪನ್ನ

Mainashree
Updated On : 7 May 2014, 10:10 am

ಮೂಲ್ಕಿ: ಕಟೀಲಿನ ಕೆ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಮತ್ತು ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕಟೀಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಗೋಧೂಳಿ ಲಗ್ನದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.
ಪದ್ಮನೂರಿನ ವಸಂತ-ಸವಿತಾ, ಕಾರ್ಕಳದ ನಂದಳಿಕೆಯ ಶೀನ-ಸುಮಿತ್ರ, ಮೂಡುಶೆಡ್ಡೆಯ ಗಿರೀಶ್, ಸುಳ್ಯ ತೆಕ್ಕಿಲದ ಸವಿತ, ಚಿಕ್ಕಮಗಳೂರಿನ ಸಾಧು-ಮೂಡುಬಿದಿರೆ, ವಾಲ್ಪಾಡಿಯ ಶೋಭಾ ಮತ್ತು ಉಡುಪಿಯ ಕುಕ್ಕುಂದೂರಿನ ಸುರೇಶ-ಚಿಕ್ಕಮಗಳೂರಿನ ಶ್ಯಾಮಲ ಪಾಣಿಗ್ರಹಣ ಮಾಡಿದರು.
ಬೆಂಗಳೂರಿನ ಉದ್ಯಮಿ ರಾಮದಾಸ ಮಡ್ಮಣ್ಣಾಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಧರ್ಮದರ್ಶಿ ಜಯರಾಮ ಹೆಗ್ಡೆ ಉದ್ಘಾಟಿಸಿದರು.
ಮುಂಬೈನ ಪೊವಾಯಿಯ ರುಂಡಮಾಲಿನಿ ಮಂದಿರದ ಶ್ರೀ ಸುವರ್ಣ ಬಾಬಾ, ಉದ್ಯಮಿ ಕೇಶವ ಅಂಚನ್ ಮುಂಬೈ, ಮಂಗಳೂರಿನ ಧನಂಜಯ ಆಚಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಭಾಗವಹಿಸಿದ್ದರು.
ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ರಮ್ಯ ಆಸ್ರಣ್ಣ, ಸತೀಶ್ ರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement