ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂತೂ ಮತಯಂತ್ರ ಕಾಯುವ ಪೊಲೀಸರ ರಕ್ತ ತಪಾಸಣೆ ಮಾಡಿದ್ರು

Rashmi Kasaragodu
Updated On : 12 May 2014, 2:26 am

ಮಂಗಳೂರು: ಬೊಂದೆಲ್ ಮಹಾತ್ಮ ಗಾಂಧಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮತಯಂತ್ರ ಕಾಯುವ ಪೊಲೀಸರಿಗೆ ಮಲೇರಿಯಾ ಜ್ವರ ಬಂದಿರುವ ಹಿನೆಲೆಯಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆ 27 ಸಿಬ್ಬಂದಿ ರಕ್ತ ತಪಾಸಣೆ ನಡೆಸಿತು. ಪೊಲೀಸರಿಗೆ ಮಲೇರಿಯಾ ಜ್ವರ ಬಂದಿರುವ ಹಾಗೂ ಮೂಲ ಸೌಕರ್ಯ ಕೊರತೆ ಕುರಿತು 'ಕನಡಪ್ರಭ' ಭಾನುವಾರ ವಿಶೇಷ ವರದಿ ಪ್ರಕಟಿಸಿತ್ತ್ತು. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮತ್ತು ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಸಮ್ಮುಖದಲ್ಲಿ 27 ಪೊಲೀಸರ ರಕ್ತ ತಪಾಸಣೆ ನಡೆಸಲಾಯಿತು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, 'ಪೊಲೀಸರಿಗೆ ಜ್ವರ ಬಂದಿರುವ ಕುರಿತು ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ನಡೆಸಲಾಗಿದೆ. ಇಲ್ಲಿ ಊಟ, ವಸತಿ ವ್ಯವಸ್ಥೆ ಉತ್ತಮವಾಗಿದೆ. ಹೆಚ್ಚಿನ ಸೌಲಭ್ಯ ಬೇಕಾದಲ್ಲಿ ಜಿಲ್ಲಾಡಳಿತ ವತಿಯಿಂದ ಒದಗಿಸಲಾಗುವುದು' ಎಂದರು. ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, 'ರಕ್ತ ತಪಾಸಣೆ ಮಾಡಿಸಿದ್ದು, ಮಲೇರಿಯಾ ಜ್ವರ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಪರಿಸರದ ಸುತ್ತಮುತ್ತ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement