ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಐಪಿಎಲ್ ಬೆಟ್ಟಿಂಗ್ ತಗಾದೆ: ಕೂಲಿ ಕಾರ್ಮಿಕಗೆ ಬೆದರಿಕೆ

Mainashree
Updated On : 13 May 2014, 10:03 am

ಉಪ್ಪಿನಂಗಡಿ:  ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಟ್ಟಿಂಗ್ ಕಟ್ಟಿ ಸೋತು ಪಾವತಿಸಬೇಕಾದ ಮೊತ್ತವನ್ನು ಮಗ ಪಾವತಿಸಲಿಲ್ಲ ಎಂಬ ಕಾರಣಕ್ಕಾಗಿ ಅಪ್ಪನಿಗೆ ತಂಡವೊಂದು ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ನಿವಾಸಿ ಕೃಷ್ಣಪ್ಪ ಗೌಡ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
 ಕಾಣಿಯೂರಿನ ವಸಂತ ಮತ್ತಿಬ್ಬರು ಸೇರಿ ಮನೆಗೆ ಬಂದವರೇ ಮಗ ನೀಡಬೇಕಾದ ರು. 43 ಸಾವಿರ ಹಣವನ್ನು ವಾರದೊಳಗೆ ನೀಡದಿದ್ದರೆ ಅನಿವಾರ್ಯ ಕ್ರಮ ಕೈಗೊಳ್ಳಲಾಗುವುದೆಂದೂ, ಈ ಬಗ್ಗೆ ಮುಂದಿನ 2 ದಿನಗಳೊಳಗಾಗಿ ಫೋನಾಯಿಸಿ ತಿಳಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆಂದು  ದೂರಿನಲ್ಲಿ ತಿಳಿಸಲಾಗಿದೆ.
ಕೇರಳ ಪೊಲೀಸರಲ್ಲಿ ಹಣ: ದೂರಿನಲ್ಲಿ, ತನ್ನ ಮಗ ವಿಷ್ಣು ಗೌಡ ಬೆಟ್ಟಿಂಗ್‌ನಲ್ಲಿ ಪಡೆದಿರುವ ರು. 30 ಸಾವಿರ ಹಣವನ್ನು ಆರೋಪಿಗಳು ಪಾವತಿಗೆಂದು ತರುತ್ತಿದ್ದಾಗ ಅದನ್ನು ಕೇರಳ ಪೊಲೀಸರು ವಶಪಡಿಸಿಕೊಂಡ ಕಾರಣ ಹೇಳಿ ಪಾವತಿಸಬೇಕಾದ ಹಣ ಪಾವತಿಸಲಿಲ್ಲವೆಂದು ಉಲ್ಲೇಖಿಸಲಾಗಿದೆ. ವೃದ್ಧಾಪ್ಯದಲ್ಲೂ ಕೂಲಿ ಕಾರ್ಮಿಕನಾಗಿ ದುಡಿದು ಗೌರವದಿಂದ ಬಾಳುತ್ತಿರುವ ಕೃಷ್ಣಪ್ಪ ಗೌಡ, ಪ್ರಕರಣದಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದು ತನಗೆ ತಿಳೀದಿಲ್ಲವೆಂದೂ, ಒಟ್ಟಾರೆ ತನ್ನ ಗೌರವಯುತ ಬದುಕಿಗೆ ಹಾಗೂ ನೆಮ್ಮದಿಯುತ ಜೀವನಕ್ಕೆ ತೊಂದರೆಯೊಡ್ಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಲು ದೂರಿನಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement