ಪರೀಕ್ಷೆಯಲ್ಲಿ ಅನುತ್ತೀರ್ಣ: ಬಾಲಕ ಆತ್ಮಹತ್ಯೆ
ಉಪ್ಪಿನಂಗಡಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಬಗ್ಗೆ ಮನನೊಂದು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಲ್ಯ ಗ್ರಾಮದ ಕಡ್ತಿಮಾರ್ನಲ್ಲಿ ನಡೆದಿದೆ. ಕಡ್ತಿಮಾರ್ ನಾರಾಯಣ ಗೌಡ ಎಂಬವರ ಪುತ್ರ ಅಭಿಜಿತ್ (16) ಮೃತ ಬಾಲಕ, ನೆಲ್ಯಾಡಿಯ ಪಡುಬೆಟ್ಟು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ. ಸೋಮವಾರ ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶವನ್ನು ಮೊಬೈಲ್ನಲ್ಲಿ ಎಸ್ಎಂಎಸ್ ಮೂಲಕ ಪಡೆದಿದ್ದ. ಆದರೆ ಅನುತ್ತೀರ್ಣನಾದ ಬಗ್ಗೆ ಮನನೊಂದು, ಆಡು ಮೇಯಿಸಲೆಂದು ಗುಡ್ಡಕ್ಕೆ ಹೋದಾತ ಆಡಿನ ಹಗ್ಗ ಬಳಸಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾನೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.