'ಬದುಕು ಬಯಲು' ಕನ್ನಡ ನಾಟಕ ಪ್ರದರ್ಶನ
ಮೂಲ್ಕಿ: ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಿನ್ನಿಗೋಳಿಯ ಯುಗಪುರುಷ ಮತ್ತು ವಿಜು ಕಲಾವಿದರು ಸಂಸ್ಥೆಯ ಸಹಯೋಗದೊಂದಿಗೆ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ ಹೆಗ್ಗೋಡಿನ ಜನಮನದಾಟ ತಂಡದಿಂದ 'ಬದುಕು ಬಯಲು' ಕನ್ನಡ ನಾಟಕ ಪ್ರದರ್ಶಿಸಲ್ಪಟ್ಟಿತು. ಶ್ರೀ ಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರು ನಾಟಕ ತಂಡದ ಮುಖ್ಯಸ್ಥ ಜಯರಾಮ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ವಿಜಯ ಕಲಾವಿದರು ಸಂಸ್ತೆಯ ಶರತ್ ಶೆಟ್ಟಿ, ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ನ ಪ್ರಬಂಧಕ ಕೇಶವ್, ಕಟೀಲು ದೇವಳ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಯರಾಮ ಪೂಂಜ ಮತ್ತಿತರರ ಉಪಸ್ತಿತಿಯಲ್ಲಿ ಸನ್ಮಾನಿಸಿದರು.