ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಲಬಾರಿ ಸಹಚರರ ಸೆರೆ

Lingaraj Badiger
Updated On : 14 May 2014, 11:56 am

ಮಂಗಳೂರು: ಭೂಗತ ಪಾತಕಿಯಾಗಿದ್ದು ಈಗ ಜೈಲ್‌ನಲ್ಲಿರುವ ರಶೀದ್ ಮಲಬಾರಿ ಸಹಚರ ರಾದ್ ಫೈಸಲ್ ಮತ್ತು ತಲ್ಲತ್ ನನ್ನು ಮೂಡುಬಿದರೆ ಪೊಲೀಸರು ಬಂಧಿಸಿದ್ದಾರೆ. ಕಡಂದಲೆ ಪೂಪಾಡಿಕಲ್ಲು ನಿವಾಸಿ  ಫೈಜಲ್ (28), ಮಂಗಳೂರು ಬಜಾಲ್ ನಿವಾಸಿ ತಲ್ಲತ್ ಬಂಧಿತರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ರವಿ ಪೂಜಾರಿ ಸಹಚರ ಸೆರೆ
ಮಂಗಳೂರು: ಕೂಳೂರು ವಲ್ಡ್‌ವೈಡ್ ಸಂಸ್ಥೆಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ ರವಿ ಪೂಜಾರಿ ಸಹಚರ ರುತುರಾಜ್ ಶ್ರೀಕಾಂತ್ ಕೋತ್ (20)ನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಹಮ್ಮದ್ ಮೊಯ್ದಿನ್ ಎಂಬವರ ಮಾಲೀಕತ್ವದ ವರ್ಲ್ಡ್‌ವೈಡ್ ಸಂಸ್ಥೆಗೆ ನುಗ್ಗಿ, ಬೆದರಿಸಿದ್ದರು. ಈಗಾಗಲೇ ಮುಂಬಯಿ ಗಣೇಶ್ ಲಕ್ಷ್ಮಣ, ಸಾಕೇತ್ ಮತ್ತು ಮುಖೇಶ್ ಶಿವಾಜಿ ಕಾಂಬ್ಳೆ, ಕಮಾಲ್ ಸಿಂಗ್ ರಜಪೂತ್ ಮತ್ತು ದತ್ತಾತ್ರೇಯ ತುಕಾರಾಂ ವಾಗ್ರೆ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪಿಸ್ತೂಲ್, 3ರೌಂಡ್ಸ್ ಮದ್ದುಗುಂಡು  ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.  ಬಿಜೈ ಆನೆಗುಂಡಿ ಭಾರತಿ ಬಿಲ್ಡರ್ಸ್ ಕಚೇರಿಗೂ ನುಗ್ಗಿ ಪಿಸ್ತೂಲ್ ತೋರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement