ಅಂತ್ಯ ಸಂಸ್ಕಾರಕ್ಕೆ ಜನ ಸಾಗರ
ಮಂಗಳೂರು: ಪಿರಿಯಾಪಟ್ಟಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಅಂತಿಮ ಸಂಸ್ಕಾರ ದೇರಳಕಟ್ಟೆಯಲ್ಲಿ ನಡೆಯಿತು. ಬುಧವಾರ ತಡರಾತ್ರಿ 1 ಗಂಟೆವರೆಗೂ ಜನರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಗಾಯಗೊಂಡವರಲ್ಲಿ ಹಫ್ಸಾ ಮತ್ತು ಶಾಮ್ನಾ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದೇರಳಕಟ್ಟೆಯ ಪಿ.ಎಚ್. ಮುಹಮದ್ ಅವರ ಪುತ್ರಿ ಶಫೀಡಾ (07), ಮಗ ಮೊಹಮ್ಮದ್ ಮುಸ್ತಫಾ ಶಾಮೋನ್ (01), ಅತ್ತೆ ರುಕಿಯಾ (55), ಪತ್ನಿಯ ದೊಡ್ಡಮ್ಮ ಆಸಿಯಮ್ಮಾ (60), ಪತ್ನಿಯ ಸೋದರ ಸಂಬಂಧಿ ಅಸೈಗೋಳಿ ಜುನೈದ್ (19).
ದೇರಳಕಟ್ಟೆಯ ಇನ್ನೊಂದು ಕುಟುಂಬದ ಅಮೀರುದ್ದೀನ್ (50), ಮಗಳು ಫೌಜಿಯಾ (26) ಫೌಜಿಯ ಮಗ ಇಶಾನ್ (07). ಟೆಂಪೊ ಟ್ರಾವೆಲರ್ ಚಾಲಕ ಬಿಸಿರೋಡ್ ಮೈಂದಾಲ ಸೂರುಗುಡ್ಡೆ ನಿವಾಸಿ ಶರಾಫುದ್ದೀನ್. ತನ್ನ ಕುಟುಂಬದ ಐದು ಮಂದಿಯನ್ನು ಕಳೆದುಕೊಂಡ ಪಿ.ಎಚ್.ಮೊಹಮ್ಮದ್ (40) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಹಮ್ಮದ್ ಪತ್ನಿ ಝೀನತ್ (30), ಮಗಳು ಶಾಮ್ನ (09), ಝೀನತ್ ಕಿರಿ ಸಹೋದಜರಿ ಬುಶ್ರಾ (24), ಬುಶ್ರಾ ಮಗಳು ಸಫಾ (01), ಝೀನತ್ ಹಿರಿ ಸಹೋದರಿ ರಝಿಯಾ (35), ರಝೀಯಾ ಅವರ ಇಬ್ಬರು ಮಕ್ಕಳಾದ ಹಫೀಝ್ (10), ಇಫಾಜ್ (01) ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದು ಕುಟುಂಬದ ಅಮಿರುದ್ದೀನ್ ಅವರ ಪತ್ನಿ ಹಫ್ಸಾ (47), ಮಗ ಆರೀಫ್ (19), ಅಮೀರುದ್ದೀನ್ ಅಳಿಯ ಮೊಹಮ್ಮದ್ ಇಕ್ಬಾಲ್ (32), ಫೌಜಿಯಾ ಮಗ ಮೊಹಮ್ಮದ್ ಇಶಾನ್, ಕೃಷ್ಣಾಪುರದ ಬಾಲಕ ಮೈಸೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.